Site icon PowerTV

ಹಾಲಿನ ದರ 5 ರೂ. ಹೆಚ್ಚಳಕ್ಕೆ ನಿರ್ಧಾರ

ಬೆಂಗಳೂರು : ನಂದಿನಿ ಹಾಲಿನ ದರವನ್ನು ಲೀಟರ್‌ಗೆ ‍5 ರೂ.ಗೆ ಹೆಚ್ಚಿಸಲು ಕೆಎಂಎಫ್ ತೀರ್ಮಾನಿಸಿದೆ.

ಇಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಹಾಲಿನ ದರ ಹೆಚ್ಚದ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮತಿ ಪಡೆದು ದರ ಹೆಚ್ಚಳಕ್ಕೆ ತೀರ್ಮಾನಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮತಿ ನೀಡಿದರೆ, ಹಾಲಿನ ದರ ಹೆಚ್ಚಾಗಲಿದೆ. ರಾಜ್ಯದಲ್ಲಿ ನಂದಿನಿ ಹಾಲಿನ ದರಕ್ಕೆ ಹೋಲಿಸಿದರೆ ಖಾಸಗಿ ಹಾಲು ಸಂಸ್ಥೆಗಳು ಹೆಚ್ಚು ದರ ವಸೂಲಿ ಮಾಡುತ್ತಿವೆ.

ಸಿಎಂ ತೀರ್ಮಾನ ಮಾಡಲಿ

ಕೆಎಂಎಫ್ (ಕರ್ನಾಟಕ ಹಾಲು ಒಕ್ಕೂಟ) ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಭೀಮಾನಾಯ್ಕ್ ಅವರು, ಸದ್ಯ ಎಲ್ಲಾ ಬೋರ್ಡ್ಗಳು 5 ರೂ. ಏರಿಕೆಗೆ ಬೇಡಿಕೆ ಇಟ್ಟಿದ್ದಾರೆ. ನಮ್ಮ ಬೇಡಿಕೆ 5 ರೂ. ಏರಿಸಬೇಕೆಂದಿದೆ. ಇದನ್ನು ಮುಖ್ಯಮಂತ್ರಿಗಳ ಮುಂದೆ ಇಡ್ತೀವಿ. ಸಿಎಂ ಏನು ತೀರ್ಮಾನ ಮಾಡ್ತರೋ ಮಾಡಲಿ ಎಂದು ಹೇಳಿದ್ದರು.

ಪ್ರೋತ್ಸಾಹ ದರ ಹೆಚ್ಚಳ

ರೈತರಿಂದ ಖರೀದಿ ಮಾಡುವ ಹಾಲಿನ ಮೇಲೆ ಪ್ರೋತ್ಸಾಹ ದರವನ್ನು ಹೆಚ್ಚಿಸುವ ಬಗ್ಗೆಯೂ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿ ಕ್ರಮ ಕೈಗೊಳ್ಳುತ್ತೇವೆ. ಗ್ರಾಹಕರಿಗೆ ನೀಡುವ ಹಾಲಿನ ದರದ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.

Exit mobile version