Site icon PowerTV

ವರುಣಾರ್ಭಟಕ್ಕೆ ಕಾಫಿನಾಡು ತತ್ತರ, ಧರೆಗುರುಳಿದ 70ಕ್ಕೂ ಹೆಚ್ಚು ಅಡಿಕೆ ಮರ

ಚಿಕ್ಕಮಗಳೂರು : ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ ಚಿಕ್ಕಮಗಳೂರು ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಭಾರೀ ಅವಾಂತರವೇ ಸೃಷ್ಟಿಯಾಗಿದೆ.

ಶೃಂಗೇರಿ ತಾಲೂಕಿನ ಕೋಗಾರ್ ಮಸಿಗೆ ಗ್ರಾಮದಲ್ಲಿ ರೈತ ನಾರಾಯಣ ಎಂಬುವವರ ಅಡಿಕೆ ತೋಟ ಭಾರೀ ಮಳೆಯಿಂದ ನಾಶವಾಗಿದೆ. ತೋಟದ ಮಾಲೀಕರ ಆಕ್ರಂದನ ಮುಗಿಲು ಮುಟ್ಟಿದೆ.

ನಿನ್ನೆ ರಾತ್ರಿಯಿಂದಲೂ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ 70ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿದೆ. ಅಡಿಕೆ ಮರಗಳ ಜೊತೆ ತೋಟದ ಕಾಡು ಜಾತಿಯ ಮರಗಳು ಕೂಡ ಧರೆಗುರುಳಿವೆ. ಮಳೆ ಹಾಗೂ ಗಾಳಿಗೆ ಮಸಿಗೆ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

ಇದನ್ನೂ ಓದಿ : ಭಾರಿ ಮಳೆ : ಕರಾವಳಿಯ ಜಿಲ್ಲೆಗಳಲ್ಲಿಂದು ಶಾಲೆ, ಕಾಲೇಜಿಗೆ ರಜೆ ಘೋಷಣೆ

ಧರೆ ಕುಸಿತದ ಭೀತಿ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಆರ್ಭಟಕ್ಕೆ ಮನೆಯ ಮುಂದಿನ ಧರೆ ಕುಸಿದಿ ಘಟನೆ ಶೃಂಗೇರಿ ತಾಲೂಕಿನ ಮೆಗಲು ಬೈಲು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಆರು ಮನೆಗಳಿಗೆ ಇನ್ನಷ್ಟು ಧರೆ ಕುಸಿತದ ಭೀತಿ ಎದುರಾಗಿದೆ.

ಮೂರು ಕಡೆ ಬಿರುಕು ಬಿಟ್ಟ ಭೂಮಿ

ಗ್ರಾಮ ಪಂಚಾಯಿತಿಯಿಂದ ರಸ್ತೆ ನಿರ್ಮಾಣದ ವೇಳೆ ಮಣ್ಣು ತೆಗೆಯಲಾಗಿತ್ತು. ಇದೆ ರಸ್ತೆಯ ಮತ್ತೊಂದು ಕಡೆ ಭೂಮಿ ಕುಸಿದಿದೆ. ಎರಡರಿಂದ ಮೂರು ಕಡೆ ಭೂಮಿ ಬಿರುಕು ಬಿಟ್ಟದೆ. ಸ್ಥಳಕ್ಕೆ ಶೃಂಗೇರಿ ತಹಶೀಲ್ದಾರ್ ಗೌರಮ್ಮ ಹಾಗೂ  ಆರ್.ಐ ಜಗದೀಶ್ ಭೇಟಿ ನೀಡಿ ಪರಶೀಲನೆ ನಡೆಸಿದ್ದಾರೆ.

Exit mobile version