Site icon PowerTV

ಪೊಲೀಸರ ವಶದಲ್ಲಿದ್ದ ಆರೋಪಿ ಅಸ್ವಸ್ಥ, ಬಿಮ್ಸ್ ಆಸ್ಪತ್ರೆಗೆ ಶಿಫ್ಟ್

ಬೆಳಗಾವಿ : ಪೊಲೀಸರ ವಶದಲ್ಲಿದ್ದ ಆರೋಪಿ ಮೂರ್ಛೆಯಿಂದ ತೀವ್ರ ಅಸ್ವಸ್ಥನಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ನಿತೇಶ ದಾಫಳೆ(35) ಅಸ್ವತ್ಥ ಆರೋಪಿ. ಈತನನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಎಪಿಎಂಸಿ ಪೊಲೀಸರು ಭೇಟಿ, ಆರೋಗ್ಯದ ಬಗ್ಗೆ ಮಾಹಿತಿ ನಡೆಸಿದ್ದಾರೆ.

ಸರಗಳ್ಳತನ ಪ್ರಕರಣ ಹಿನ್ನಲೆ ಆರೋಪಿ ನಿತೇಶನನ್ನು ಕೊಲ್ಹಾಪುರ ಪೊಲೀಸರು ಅರೆಸ್ಟ್ ಮಾಡಿದ್ದರು. ಬಾಡಿ ವಾರೆಂಟ್ ಮೇಲೆ ಆರೋಪಿಯನ್ನು ಕೊಲ್ಹಾಪುರ ಪೊಲೀಸರಿಂದ ಬೆಳಗಾವಿ ಎಪಿಎಂಸಿ ಪೊಲೀಸರು ವಶಕ್ಕೆ ಪಡೆದು ಕಳೆದ ಮೂರು ದಿನಗಳಿಂದ ವಿಚಾರಣೆ ನಡೆಸುತ್ತಿದ್ದರು.

ಎಪಿಎಂಸಿ ಪೊಲೀಸರ ವಶದಲ್ಲಿ ಇದ್ದ ನಿತೇಶನನ್ನು ಇಂದು ಬೆಳಗ್ಗೆ ಪೊಲೀಸ್ ವಿಚಾರಣೆ ನಡೆಸುತ್ತಿದ್ದರು. ಈ ವೇಳೆಯಲ್ಲಿ ಆರೋಪಿ ಅಸ್ವಸ್ಥನಾಗಿದ್ದಾನೆ. ಕೂಡಲೇ ಈತನನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇದನ್ನೂ ಓದಿ : ಪ್ರಿಯತಮೆಯ ಕೊಂದು ಎಸ್ಕೇಪ್ ಆಗಿದ್ದ ಪ್ರೇಮಿಯ ಬಂಧನ

ಅಪರಿಚಿತ ಮಹಿಳೆ ಹತ್ಯೆ

ಅಪರಿಚಿತ ಮಹಿಳೆಯನ್ನು ದುಷ್ಕರ್ಮಿಗಳು ಹತ್ಯೆಗೈದು ಜಮೀನಿನಲ್ಲಿ ಎಸೆದು ಪರಾರಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಉಣ್ಣಿಬಾವಿ ಕ್ರಾಸ್ ಬಳಿ ಘಟನೆ.

ಸುಮಾರು 30-35 ವಯಸ್ಸಿನ ಮಹಿಳೆಯ ಹತ್ಯೆ. ಹತ್ಯೆಯ ನಂತರ ಮುಖದ ಮೇಲೆ ಕಲ್ಲು ಎಸೆದು ಮುಖದ ಗುರುತು ಸಿಗದಂತೆ ಮಾಡಿದ್ದಾರೆ. ಸ್ಥಳಕ್ಕೆ ನಿಡಗುಂದಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version