Site icon PowerTV

ನೀವೇನು ವಿಪಕ್ಷ ನಾಯಕರಲ್ಲ ಸುಮ್ನೆ ಕೂತ್ಕೊಳ್ರಿ : ಕೋಟಗೆ ಗದರಿದ ಸಭಾಪತಿ

ಬೆಂಗಳೂರು : ವಿಧಾನ ಪರಿಷತ್ ಸದಸ್ಯ ಯು.ಬಿ ವೆಂಕಟೇಶ್ ಮಾತನಾಡುವ ವೇಳೆ ಕೆರಳಿದ ಕೋಟ ಶ್ರೀನಿವಾಸ ಪೂಜಾರಿಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಗದರಿದ ಪ್ರಸಂತ ನಡೆಯಿತು.

ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ‌ ಚರ್ಚೆ ಆರಂಭವಾದಾಗ ಮಾತನಾಡಿದ ಕಾಂಗ್ರೆಸ್ ನ ಯು.ಬಿ ವೆಂಕಟೇಶ್ ಅವರು, ಹಿಂದಿನ ಸರ್ಕಾರ (ಬಿಜೆಪಿ ಸರ್ಕಾರ) ಸತ್ತು ಹೋಗಿತ್ತು ಎಂದರು.

ಬಿಜೆಪಿಯವರು ಇಬ್ಬರು ಮುಖ್ಯಮಂತ್ರಿಗಳನ್ನು ಮಾಡಿದ್ರು. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಕಣ್ಣೀರು ಹಾಕಿಸಿ ಅಧಿಕಾರದಿಂದ ಇಳಿಸಿದ್ರು ಅಂತ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : ಇಲ್ಲೇ ಪಂಚೆ ಹಾಸ್ಕೊಂಡು ಮಲಗ್ತೀವಿ : ಹೆಚ್.ಡಿ ರೇವಣ್ಣ ಎಚ್ಚರಿಕೆ

ಚರ್ಚೆಯಲ್ಲಿ ಇದೆಲ್ಲ ಬರುತ್ತಾ?

ಯು.ಬಿ ವೆಂಕಟೇಶ್ ಮಾತಿಗೆ ಕೆರಳಿದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು, ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಇದೆಲ್ಲ ಬರುತ್ತಾ? ಎಂದು ಆಕ್ರೋಶ ಹೊರಹಾಕಿದರು. ಆಗ ಸಭಾಪತಿಗಳು, ನೀವೇನು ವಿಪಕ್ಷ ನಾಯಕರಲ್ಲ ಸುಮ್ಮನೆ ಕೂತ್ಕೊಳ್ರಿ. ನೀವು ಸಭಾನಾಯಕರಾಗಿ ಕೆಲಸ ಮಾಡಿದವರು, ಅರ್ಥ ಮಾಡಿಕೊಳ್ಳಿ ಅಂತ ಕೋಟಾ ಶ್ರೀನಿವಾಸ ಪೂಜಾರಿಗೆ ಗದರಿದರು. ನೀವು ಮಾತು ಮುಂದುವರೆಸಿ ಎಂದು ಯು.ಬಿ ವೆಂಕಟೇಶ್‌ಗೆ ಸೂಚನೆ ನೀಡಿದರು.

Exit mobile version