Site icon PowerTV

ಹಾಲಿನ ಪುಡಿಯಲ್ಲೂ ದಂಧೆ ಶುರು ಮಾಡಿದ್ದೀರಾ? : ಬಿಜೆಪಿ ಕಿಡಿ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಮಕ್ಕಳು-ಮಹಿಳೆಯರಿಗೆ ಕೊಡುವ ಹಾಲಿನ ಪುಡಿಯಲ್ಲೂ ದಂಧೆ ಶುರು ಮಾಡಿದ್ದೀರಾ? ಎಂದು ರಾಜ್ಯ ಬಿಜೆಪಿ ಕುಟುಕಿದೆ.

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಹಾಲಿನ ಪುಡಿ ವಿತರಣೆ ಬಗ್ಗೆ ಇನ್ನೂ ತಮಗೆ #ShadowCM ಅವರಿಂದ ಟಿಪ್ಪಣಿ ಬಂದಿಲ್ಲವೇ? ಎಂದು ಚಾಟಿ ಬೀಸಿದೆ.

ರಾಜ್ಯದ ಅಂಗನವಾಡಿಗಳಿಗೆ ಎಂಟು ತಿಂಗಳಿಂದ ಕೆನೆರಹಿತ ಹಾಲಿನ ಪುಡಿ ಸರಬರಾಜು ಸ್ಥಗಿತವಾಗಿದೆ. ಕಾಂಗ್ರೆಸ್ ಸರ್ಕಾರ ಮೊಂಡುತನ ಬಿಟ್ಟು ಹಾಲಿನ ಪುಡಿ ವಿತರಣೆಗೆ ಕೂಡಲೇ ಕ್ರಮ ಕೈಗೊಳ್ಳಲಿ ಎಂದು ರಾಜ್ಯ ಬಿಜೆಪಿ ಆಗ್ರಹಿಸಿದೆ.

ಇದನ್ನೂ ಓದಿ : ಸರ್ಕಾರದ ಪತನದ ಬಗ್ಗೆ ಸುಳಿವು ಕೊಟ್ಟ ಮಾಜಿ ಸಿಎಂ ಬೊಮ್ಮಾಯಿ

ನಿತ್ಯವೂ ವರ್ಗಾವಣೆ ದಂಧೆ

ನಿತ್ಯವೂ ವರ್ಗಾವಣೆ ದಂಧೆ ನಿರ್ವಹಣೆ, ಕಮಿಷನ್‌ ಮಾರ್ಗ ಆವಿಷ್ಕಾರದಲ್ಲಿರುವ ಕಾಂಗ್ರೆಸ್‌ ಸರ್ಕಾರಕ್ಕೆ ರಾಜ್ಯದ ಜನ ಕಷ್ಟಕ್ಕೆ ಸಿಲುಕುತ್ತಿರುವುದು ಕಣ್ಣಿಗೆ ಕಾಣುತ್ತಿಲ್ಲ. 36 ಲಕ್ಷ ಮಹಿಳೆಯರು ಹಾಗೂ 7.5 ಲಕ್ಷ ಗರ್ಭಿಣಿಯರು ಮತ್ತು ಬಾಣಂತಿಯರ ಪೌಷ್ಠಿಕಾಂಶ ನಿರ್ವಹಣೆಗಾಗಿ ನೀಡಲಾಗುತ್ತಿದ್ದ ಹಾಲಿನ ಪುಡಿ ಸರಬರಾಜನ್ನೂ ಈ ಎಟಿಎಂ ಸರ್ಕಾರ (ATM Sarkara) ನಿಲ್ಲಿಸಿದೆ ಎಂದು ಛೇಡಿಸಿದೆ.

ಹಾಲಿನ ಪುಡಿ ಸರಬರಾಜು ಬಂದ್ ಆಗಿರುವುದರಿಂದ ಮಾತೃಪೂರ್ಣ ಯೋಜನೆಯಡಿ ಬರುವ ಗರ್ಭಿಣಿಯರು ಮತ್ತು ಬಾಣಂತಿಯರು ಪೌಷ್ಟಿಕಾಂಶಯುಕ್ತ ಹಾಲಿನಿಂದ ವಂಚಿತರಾಗಿದ್ದಾರೆ.

Exit mobile version