Site icon PowerTV

ದಾವಣಗೆರೆ ವೇಗವಾಗಿ,ಸುಂದರವಾಗಿ ಬೆಳೆಯಲು ಸಿದ್ದೇಶ್ವರ್ ಕಾರಣ : ಯಡಿಯೂರಪ್ಪ

ದಾವಣಗೆರೆ ಜಿಎಂ ಸಿದ್ದೇಶ್ವರ್ ಅಭಿವೃದ್ದಿ ಚಿಂತನೆಯಲ್ಲಿ ಬೆಳೆದವರು,ನಾಲ್ಕು ಭಾರೀ ಗೆದ್ದು ಬಿಜೆಪಿ ಭದ್ರಕೋಟೆ ನಿರ್ಮಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಸದ ಸಿದ್ದೇಶ್ವರರನ್ನು ಹಾಡಿ ಹೊಗಳಿದ್ದಾರೆ.

ದಾವಣಗೆರೆಯಲ್ಲಿ ಆಯೋಜಿಸಿದ್ದ ಸಂಸದ ಜಿ.ಎಂ.ಸಿದ್ದೇಶ್ವರ್ ಜನ್ಮದಿನಾಚರಣೆಯ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಮಾಜಿಕ ನಿಲುವು ಹೊಂದಿ ಕೇಂದ್ರ ಸಚಿವರಾಗಿ ಶ್ರಮಿಸಿದ್ದಾರೆ ಅಲ್ಲದೆ ದಾವಣಗೆರೆಯಲ್ಲಿ ಶಿಕ್ಷಣ ಕ್ರಾಂತಿಗೆ ಕಾರಣರಾಗಿದ್ದಾರೆ ಎಂದು ಯಡಿಯೂರಪ್ಪ ಸಿದ್ದೇಶ್ವರ್ ಗುಣಗಾನ ಮಾಡಿದ್ದಾರೆ.

ದಾವಣಗೆರೆಯು ಸ್ಮಾರ್ಟ್ ಸಿಟಿಯಾಗಲು ಕಾರಣರಾಗಿರುವ ಸಿದ್ದೇಶ್ವರ್ ಅವರು ನಾನು ಮುಖ್ಯಮಂತ್ರಿಯಾಗಿದ್ದಾಗ ಅನುದಾನ ತಂದು ಅಭಿವೃದ್ದಿ ಮಾಡಿದ್ದಾರೆ ಅದಕ್ಕಾಗಿಯೇ ದಾವಣಗೆರೆ ವೇಗವಾಗಿ ಬೆಳೆಯಲು ಸಾಧ್ಯವಾಗಿದೆ ಹಾಗೂ ಸುಂದರವಾಗಿ ಕಾಣುತ್ತಿದೆ ಎಂದು ಸಿದ್ದೇಶ್ವರ್ ಅಭಿವೃದ್ದಿ ಕಾರ್ಯಗಳನ್ನು ಸ್ಮರಿಸಿದರು.

Exit mobile version