ಬೆಂಗಳೂರು : ತಮ್ಮನ್ನು ಹಾಸನ ಜಿಲ್ಲೆಯ ಶಾಸಕ ಎಂದು ಕರೆದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಮೇಲೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಸಿಡಿಮಿಡಿಗೊಂಡ ಘಟನೆ ನಡೆಯಿತು.
ವಿಧಾಸಭಾ ಕಲಾಪದಲ್ಲಿ ಈ ಸ್ವಾರಸ್ಯಕರ ಪ್ರಸಂಗ ನಡೆಯಿತು. ನಾವು ಬಡವರ ಮಕ್ಕಳು, ಯಾಕೆ ನನ್ನನ್ನು ಹಾಸನ ಶಾಸಕರು ಅಂತಾ ಕರೀತ್ತೀರಿ, ಹೆಸರು ಹಿಡಿದು ಕರೀರಿ, ನಿಮಗೆ ೧೦ ಲಕ್ಷ ಜನರು ಹೆಸರು ಹಿಡಿದು ಕರೆದ್ರೆ ನನಗೆ ೨ ಲಕ್ಷ ಜನ ಆದರೂ ಹೆಸರು ಹಿಡಿದು ಕರೆದು ಕರೀತ್ತಾರೆ ಎಂದು ಕುಮಾರಸ್ವಾಮಿಯವರಿಗೆ ಶಿವಲಿಂಗೇಗೌಡ ಕೌಂಟರ್ ನೀಡಿದರು.
ಇವಾಗ ಏನೋ ನೀವು ನಮ್ಮ ವಿಶ್ವಾಸ ಕಳೆದುಕೊಂಡ್ರಿ, ಅದಕ್ಕಾಗಿ ನಾವು ಹೊರಗಡೆ ಬಂದಿದ್ದೇವೆ
ಆದರೆ ನೀವು ಹಾಸನ ಜಿಲ್ಲೆಯ ಶಾಸಕರು ಅಂತಾ ಕರೆಯೋದು ಎಷ್ಟು ಸರೀ..? ಎಂದು ಶಿವಲಿಂಗೇಗೌಡ ಸದನದಲ್ಲಿಯೇ ನೇರವಾಗಿಯೇ ಕುಮಾರಸ್ವಾಮಿಯವರಿಗೆ ತಿರುಗೇಟು ನೀಡಿದರು.
ಶಿವಲಿಂಗೇಗೌಡರ ಮಾತಿನ ಬಳಿಕ ಕೊನೆಗೆ ಶಿವಲಿಂಗೇಗೌಡ್ರೇ ಎಂದು ಹೆಸರು ಹೇಳಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ.