Site icon PowerTV

‘ಗ್ಯಾರಂಟಿ’ ಕದನ : ಸದನದಲ್ಲಿ ಸರ್ಕಾರದ​​ ವಿರುದ್ಧ ಹೋರಾಟಕ್ಕೆ ಬಿಜೆಪಿ ಪ್ಲ್ಯಾನ್​​​

ಬೆಂಗಳೂರು: ವಿಧಾನಸಭೆ ಅಧಿವೇಶನದ ಮೊದಲ ದಿನವೇ ಕಾಂಗ್ರೆಸ್ ಸರ್ಕಾರದ ‘ಗ್ಯಾರಂಟಿ’ಗಳನ್ನು ಜಾರಿಗೊಳಿಸಲು ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷ ಬಿಜೆಪಿ ನಾಯಕರು ಪಟ್ಟುಹಿಡಿದ ಸದನದಲ್ಲಿ ಧರಣಿ ನಡೆಸಿದರು.

ಹೌದು, ವಿಧಾನಸಭೆಯಲ್ಲಿ ನಿನ್ನೇ ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ಸಭಾಧ್ಯಕ್ಷ ಯು.ಟಿ. ಖಾದರ್ ಪ್ರಶೋತ್ತರ ಕಲಾಪ  ಆರಂಭಿಸಿದರು. ಕಾಂಗ್ರೆಸ್‌ನ ಕೆ.ಎಂ. ಶಿವಲಿಂಗೇಗೌಡ ಅವರು ಗೃಹ ಸಚಿವ ಜಿ. ಪರಮೇಶ್ವರ ಅವರಿಗೆ ಮೊದಲ ಪ್ರಶ್ನೆ ಕೇಳಿದರು. ಸಚಿವರು ಉತ್ತರವನ್ನೂ ನೀಡಿದರು. ತಕ್ಷಣ ಮಧ್ಯ ಪ್ರವೇಶಿಸಿದ ಬಿಜೆಪಿಯ ಬಸವರಾಜ ಬೊಮ್ಮಾಯಿ, ಆರ್. ಅಶೋಕ, ವಿ. ಸುನಿಲ್ ಕುಮಾರ್ ಮತ್ತಿತರರು, ಸುಳ್ಳು ಭರವಸೆಗಳನ್ನು ನೀಡಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ.

 ಇದನ್ನೂ ಓದಿ: ಯಡಿಯೂರಪ್ಪ ಇನ್ನೂ 18 ವರ್ಷದ ಯುವಕರೇ? : ಕಾಂಗ್ರೆಸ್ ಟಾಂಗ್ 

ಈಗ ಯಾವ ಗ್ಯಾರಂಟಿಯನ್ನೂ ಅನುಷ್ಠಾನಕ್ಕೆ ತರುತ್ತಿಲ್ಲ. ಈ ಮೋಸದ ಕುರಿತು ನಿಲುವಳಿ ಸೂಚನೆ ಮಂಡನೆಗೆ ಅವಕಾಶ ಕೋರಿ ನೋಟಿಸ್‌ ನೀಡಿದ್ದೇವೆ. ಪ್ರಶೋತ್ತರ ಕಲಾಪವನು ಬದಿಗೊತಿ ವಿಷಯ ಪಸಾಪಿಸಲು ಅವಕಾಶ ನೀಡಬೇಕು’ ಎಂದು ಆಗ್ರಹಿಸಿದರು.

ಸ್ಪೀಕರ್, ಸಿಎಂ ಮನವೊಲಿಕೆಗೂ ಡೋಂಟ್​​ಕೇರ್

ನಿನ್ನೆ ಕಲಾಪದಲ್ಲಿ ಸದನದ ಬಾವಿಗಿಳಿದಿದ್ದ ಬಿಜೆಪಿ‌ ಶಾಸಕರು ಇಂದೂ ಕೂಡ ಚರ್ಚೆಗೆ ಅವಕಾಶ ಸಿಗದಿದ್ರೆ ಹೋರಾಟ ಮಾಡುತ್ತೇವೆ.ಯಾರ ಮನವೊಲಿಕೆಗೂ ನಾವು ಬಗ್ಗುವುದಿಲ್ಲ. ಗ್ಯಾರಂಟಿ ಚರ್ಚೆಗೆ ಅವಕಾಶ ನೀಡುವಂತೆ ಬಿಜೆಪಿ ಬಿಗಿ ಪಟ್ಟು ಹಿಡಿದು ನಿಲುವಳಿ ಮಂಡನೆಗೆ ಬೊಮ್ಮಾಯಿ ಸೂಚಿಸಿದ್ದಾರೆ.

ಸದನದಲ್ಲಿ ಇಂದು ಸರ್ಕಾರದ​​ ವಿರುದ್ಧ ಹೋರಾಟಕ್ಕೆ ಬಿಜೆಪಿ ಮಾಸ್ಟರ್ ಪ್ಲ್ಯಾನ್​​​

ಇಂದು ಕೂಡ ವಿಧಾನಸಭಾ ಕಲಾಪ ಆರಂಭವಾಗಲಿದ್ದು, ಸದನದಲ್ಲಿ ಬಿಜೆಪಿ ಸರ್ಕಾರ ಗ್ಯಾರಂಟಿಗಳ ವಿರುದ್ಧ ಹೋರಾಟ ಮಾಡಲು ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದ್ದೀಯಾ ಎಂಬುವುದನ್ನು ಕಾದುನೋಡಬೇಲಿದೆ. ​​​

 

 

 

 

 

Exit mobile version