Site icon PowerTV

ನಮ್ಗೆ 40% ಕಮಿಷನ್ ಅಂತಿದ್ರು, ಇವರದು 100% ಸರ್ಕಾರ : ರವಿಕುಮಾರ್ ಪಂಚ್

ಬೆಂಗಳೂರು : ನಮಗೆ 40 ಪರ್ಸೆಂಟ್ ಕಮಿಷನ್ ಅಂತಿದ್ರು, ಇವರ ಸರ್ಕಾರ 100% ಸರ್ಕಾರ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಕುಟುಕಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿ ಹೋಗಿದೆ ಎಂದು ಛೇಡಿಸಿದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ ಮಾತಿನಲ್ಲಿ ಸತ್ಯ ಇದೆ. ಇದೊಂದು ಕಮಿಷನ್ ಸರ್ಕಾರ. ಐಎಎಸ್ ಅಧಿಕಾರಿಗಳಿಗೆ ಇಷ್ಟು, ಕೆಎಎಸ್ ಅಧಿಕಾರಿಗಳಿಗೆ ಇಷ್ಟು ಅಂತ ರೇಟ್ ಫಿಕ್ಸ್ ಮಾಡಿದ್ದಾರೆ. ಕಮಿಷನ್ ಇಲ್ಲದೆಯೇ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಎಂದು ಗುಡುಗಿದರು.

ಇದನ್ನೂ ಓದಿ : ದಾಖಲೆ ಕೊಡೋ ಧಮ್ಮು-ತಾಕತ್ತು ನನಗೆ ಇದೆ : ಕುಮಾರಸ್ವಾಮಿ ಪಂಚ್

ಪೆನ್​ಡ್ರೈವ್​ನಲ್ಲಿ ಏನಿದೆ?

ನನ್ನ ಬಳಿ ಎಲ್ಲಾ ದಾಖಲೆಗಳು ಇವೆ ಎಂದು ಪೆನ್‍ಡ್ರೈವ್ ಬಾಂಬ್ ಸಿಡಿಸಿರುವ ಹೆಚ್​ಡಿಕೆ ವಿಚಾರ ಕುರಿತು ಮಾತನಾಡಿದ ಅವರು, ಕುಮಾರಸ್ವಾಮಿ ಪೆನ್​ಡ್ರೈವ್​ನಲ್ಲಿ ಏನಿದೆ ಅಂತ ನನಗೆ ಗೊತ್ತಿಲ್ಲ. ಆದರೆ, ಅವರ ಮಾತಿನಲ್ಲಿ ಸತ್ಯ ಇದೆ ಎಂದು ಕುಮಾರಸ್ವಾಮಿ ಪರ ಬ್ಯಾಟ್ ಬೀಸಿದರು.

ಕ್ಲಿಯರ್ ಕಟ್ ಆಗಿ ಹೇಳಿ

ಕಾಂಗ್ರೆಸ್ ಸರ್ಕಾರ ಗೋಹತ್ಯೆ ಮಾಡುವವರಿಗೆ ಸ್ಪಷ್ಟ ನಿರ್ದೇಶನ ನೀಡಿದೆ. ಗೋ ಸಾಗಾಟ ಮಾಡುವವರಿಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಗೋ ಸಂರಕ್ಷಣೆ ವಿಧೇಯಕ ವಾಪಸ್ ಪಡೆಯುವುದಾದ್ರೆ ಸರ್ಕಾರ ಕ್ಲಿಯರ್ ಕಟ್ ಆಗಿ ಹೇಳಿ. ಗೋ ಹತ್ಯೆ ವಿಧೇಯಕ ಬಗ್ಗೆ ಸ್ಪಷ್ಟವಾಗಿ ನಿರ್ಧಾರ ಪ್ರಕಟಿಸಬೇಕು ಎಂದು ಆಗ್ರಹಿಸಿದ್ದಾರೆ.

Exit mobile version