Site icon PowerTV

ಸಿದ್ರಾಮಯ್ಯ ಕುರ್ಚಿ ಖಾಲಿ ಮಾಡಲ್ಲ, ಡಿಕೆಶಿಗೆ ಕುರ್ಚಿ ಸಿಗಲ್ಲ : ಶಾಸಕ ಯತ್ನಾಳ್ ಭವಿಷ್ಯ

ಬೆಂಗಳೂರು : ಸಿದ್ದರಾಮಯ್ಯ ಕುರ್ಚಿ ಖಾಲಿ ಮಾಡಲ್ಲ, ಡಿ.ಕೆ ಶಿವಕುಮಾರ್ ಅವರಿಗೆ ಕುರ್ಚಿ ಸಿಗಲ್ಲ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸಿಎಂ ಕುರ್ಚಿ ಕಚ್ಚಾಟದ ಕುರಿತು ಲೇವಡಿ ಮಾಡಿದರು.

ಸ್ವಾತಂತ್ರ್ಯ ಪೂರ್ವದಿಂದಲೂ ಕಾಂಗ್ರೆಸ್ ಪಕ್ಷ ಜನರಿಗೆ ಮೋಸ ಮಾಡುತ್ತಾ ಬಂದಿದೆ, ಅದರ ಮತ್ತೊಂದು ರೂಪವೇ ಈ ಚುನಾವಣೆ. ನನ್ನ ಹೆಂಡತಿಗೂ ಫ್ರೀ.. ನಿನ್ನ ಹೆಂಡತಿಗೂ ಫ್ರೀ ಅಂದ್ರು. ಆದರೆ, ಯಾರಿಗೂ ಏನು ಸಿಕ್ಕಿಲ್ಲ. ಇವರು ಮಕ್ಮಲ್ ಟೋಪಿ ಹಾಕಿರೋದು ಎಂದು ಗುಡುಗಿದರು.

ಇದನ್ನೂ ಓದಿ : ನಾವು ನಮ್ಮ ಭಾವನೆ ಹೇಳ್ತೀವಿ, ನೀವು ಬೆಂಕಿ ಹಚ್ಚಬೇಡಿ : ಶಾಸಕ ಯತ್ನಾಳ್ ಟಕ್ಕರ್

ಇವ್ರು ಮನೆಗೆ ಹೋಗೋದು ನಿಶ್ಚಿತ

ಸಿದ್ದರಾಮಯ್ಯ ಕುರ್ಚಿ ಖಾಲಿ ಮಾಡುವುದಿಲ್ಲ, ಡಿಕೆಶಿಗೆ ಕುರ್ಚಿ ಸಿಗಲ್ಲ. ಅದು ಉಚಿತ.. ಇದು ಉಚಿತ.. ಇವರು ಮನೆಗೆ ಹೋಗೋದು ನಿಶ್ಚಿತ. ಇವ್ರು ಅಧಿಕಾರಕ್ಕೆ ಬಂದ 24 ತಾಸಿನಲ್ಲೇ ಜನರಿಗೆ ಗೊತ್ತಾಗಿದೆ. ಕರ್ನಾಟಕ ಮತ್ತೊಂದು ಪಾಕಿಸ್ತಾನ ಆಗುತ್ತೆ ಎಂದು ಶಾಸಕ ಯತ್ನಾಳ್ ಛೇಡಿಸಿದರು.

ಬಸ್‌ಗಳಿಗೆ ಡಬಲ್ ಹಣ ಕೊಡ್ಬೇಕು

ಎಲ್ಲ ಹೆಣ್ಣು ಮಕ್ಕಳಿಗೆ 2,೦೦೦ ಕೊಡ್ತೀನಿ ಅಂದ್ರು. ಆದರೆ, ಈಗ ಮನೆ ಯಜಮಾನಿಗೆ ಅಂತ ಹೇಳ್ತಿದ್ದಾರೆ. ನಿರುದ್ಯೋಗಿಗಳಿಗೆ ಹಣ ನೀಡುತ್ತೇವೆ ಅಂದ್ರು. ಆದರೆ, ಈಗ ಡಿಗ್ರಿ ಮುಗಿಸಿ ಒಂದು ವರ್ಷದೊಳಗಿನವರಿಗೆ ಅಂತ ಹೇಳ್ತಿದ್ದಾರೆ. ನೀವು ಈಗ ಓಡಾಡುತ್ತಿರುವ ಬಸ್‌ಗಳಿಗೆ ಡಬಲ್ ಹಣ ನೀಡಬೇಕಾಗುತ್ತೆ ಎಂದು ಕುಟುಕಿದರು.

Exit mobile version