Site icon PowerTV

2,000 ಲಂಚ ಸ್ವೀಕರಿಸುತ್ತಿದ್ದ ಲೈನ್ ಮ್ಯಾನ್ ಲೋಕಾಯುಕ್ತ ಬಲೆಗೆ

ಉಡುಪಿ : 2,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಲೈನ್ ಮ್ಯಾನ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.

ಬೈಂದೂರಿನಲ್ಲಿ ಈ ಘಟನೆ ನಡೆದಿದೆ. ಬೈಂದೂರು ಮೆಸ್ಕಾಂ ಲೈನ್ ಮ್ಯಾನ್ ರಮೇಶ್ ಬಡಿಗೇರ ಎಂಬಾತನನ್ನು ಲೋಕಾಯುಕ್ತರು ವಶಕ್ಕೆ ಪಡೆದಿದ್ದಾರೆ.

ನಾವು ಮರ ಕಡಿಯಲು ವಿದ್ಯುತ್ ಲೈನ್ ಕಟ್ ಮಾಡಿಕೊಡುವಂತೆ ಬೈಂದೂರಿನ ಕುಸುಮಾ ಎಂಬವರು ಮನವಿ ಮಾಡಿದ್ದರು. ಈ ವೇಳೆ ಲೈನ್ ಮ್ಯಾನ್ ರಮೇಶ್ ಬಡಿಗೇರ 2,000 ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು.

ಇದನ್ನೂ ಓದಿ : ಕಾರ್ಮಿಕನಿಂದ ಲಂಚ ಪಡೆಯುವಾಗ ಮಹಿಳಾ ಅಧಿಕಾರಿ ಲೋಕಾಯುಕ್ತ ಬಲೆಗೆ

ಲೋಕಾಯುಕ್ತಕ್ಕೆ ದೂರು

ಈ ಬಗ್ಗೆ ಕುಸುಮಾ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಲೋಕಾಯುಕ್ತ ಡಿವೈಎಸ್ ಪಿ ಪ್ರಕಾಶ್, ಇನ್ಸ್ಪೆಕ್ಟರ್ ಜಯರಾಮ್ ಗೌಡ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಲೈನ್ ಮ್ಯಾನ್ ರಮೇಶ್ ಬಡಿಗೇರ ಅವರನ್ನು ವಶಕ್ಕೆ ಪಡೆದಿದ್ದಾರೆ.

ಸಿಬ್ಬಂದಿಗಳಾದ ನಾಗೇಶ್, ನಾಗರಾಜ್, ಸತೀಶ್, ಮಲ್ಲಿಕಾ, ರೋಹಿತ್, ರಾಘವೇಂದ್ರ, ಪ್ರಸನ್ನ, ಅಬ್ದುಲ್, ರವೀಂದ್ರ, ರಮೇಶ್, ಸತೀಶ್, ರಾಘವೇಂದ್ರ, ಸೂರಜ್, ಸುಧೀರ್ ಕಾರ್ಯಾಚರಣೆ ತಂಡದಲ್ಲಿದ್ದರು.

Exit mobile version