Site icon PowerTV

ಅನೈತಿಕ ಸಂಬಂಧ : ಹೆಂಡ್ತಿ, ಆಕೆಯ ಪ್ರಿಯಕರನನ್ನು ಕೊಡಲಿಯಿಂದ ಕೊಚ್ಚಿ ಕೊಂದ ಗಂಡ

ಬೆಳಗಾವಿ : ತನ್ನ ಹೆಂಡತಿ ಬೇರೊಬ್ಬನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಹಿನ್ನಲೆ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಗಂಡನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಅಕ್ಕತಂಗಿಯರಹಾಳದಲ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ. ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿ ಆರೋಪಿ ಎಸ್ಕೇಪ್ ಆಗಿದ್ದಾನೆ.

ರೇಣುಕಾ ಮಾಳಗಿ (40) ಹಾಗೂ ಮಲ್ಲಿಕಾರ್ಜುನ ಜಗದಾರ್ (35) ಹತ್ಯೆಯಾದವರು. ಯಲ್ಲಪ್ಪ ಮಾಳಗಿ ಕೊಲೆಗೈದ ಪತಿ. ಮೃತ ರೇಣುಕಾಳು ಮಲ್ಲಿಕಾರ್ಜುನ ಜೊತೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದಳು ಎನ್ನಲಾಗಿದೆ.

ಇದನ್ನೂ ಓದಿ : ಗಂಡನ ಕಥೆ ಮುಗಿಸಿದ ಪತ್ನಿ, ಸೇರಿ ಐವರ ಹೆಡೆಮುರಿ ಕಟ್ಟಿದ ಖಾಕಿ

ಮನೆಯಲ್ಲಿಯೇ ಹೆಂಡತಿ ಹತ್ಯೆ

ಪತ್ನಿ ರೇಣುಕಾ ಮಾಳಗಿ ಅಕ್ರಮ ಸಂಬಂಧದ ಬಗ್ಗೆ ಪತಿಗೆ ಮಾಹಿತಿ ತಿಳಿದಿತ್ತು. ಇದರಿಂದ ಕುಪಿತನಾದ ಪತಿ ಯಲ್ಲಪ್ಪ ಮಾಳಗಿ ಮೊದಲು ತನ್ನ ಮನೆಯಲ್ಲಿ ಹೆಂಡತಿಯನ್ನು ಕೊಂದಿದ್ದಾನೆ. ಬಳಿಕ ಪ್ರಿಯಕರ  ಮಲ್ಲಿಕಾರ್ಜುನನ್ನು ಆತನ ಮನೆಯ ಅಂಗಳದಲ್ಲಿ ಕೊಲೆ ಮಾಡಿದ್ದಾನೆ.

ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಅಂಕಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version