Site icon PowerTV

ಪರ ಸ್ತ್ರೀಯೊಂದಿಗೆ ತಂದೆ ಚಕ್ಕಂದ : ವಿಡಿಯೋ ವೈರಲ್ ಹಿನ್ನೆಲೆ ಮಗ ಆತ್ಮಹತ್ಯೆ

ಮಂಗಳೂರು : ಪರ ಸ್ತ್ರೀ ಜೊತೆ ತಂದೆಯ ದೈಹಿಕ ಸಂಪರ್ಕದ ವಿಡಿಯೋ ವೈರಲ್ ಹಿನ್ನೆಲೆ ಮನನೊಂದು ಮಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಬಳಿಯ ತೋಡಾರಿನಲ್ಲಿ ನಡೆದಿದೆ.

ಸುಮಂತ್ (21) ಆತ್ಮಹತ್ಯೆಗೆ ಶರಣಾದ ಯುವಕ. ಪರಸ್ತ್ರೀ ಜೊತೆ ದೈಹಿಕ ಸಂಪರ್ಕದಲ್ಲಿದ್ದಾಗ ಸುಮಂತ್ ತಂದೆ ಸಿಕ್ಕಿ ಬಿದ್ದಿದ್ದ. ಒಂದು ವರ್ಷದ ಹಿಂದೆ ನಡೆದಿದ್ದ ಘಟನೆಯ ವಿಡಿಯೋ ವೈರಲ್ ಆಗಿತ್ತು.

ಮನನೊಂದಿದ್ದ ಯುವಕ ಆತ್ಮಹತ್ಯೆ

ಮೂರು ದಿನಗಳ ಹಿಂದೆ ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋವನ್ನು ಹರಿಯಬಿಟ್ಟಿದ್ದನು. ವಿಡಿಯೋ ನೋಡಿ ತಂದೆಯ ಜೊತೆಗೆ ನಿನ್ನೆ ಮಗ ಸುಮಂತ್ ಜಗಳ ಮಾಡಿದ್ದನು. ತೀವ್ರ ಮುಜುಗರದಿಂದ ಮನನೊಂದಿದ್ದ ಯುವಕ ಇಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ : Instagramನಲ್ಲಿ ಪರಿಚಯ, ಮದುವೆ ನೆಪದಲ್ಲಿ ಯುವತಿ ಮೇಲೆ 20 ದಿನ ಅತ್ಯಾಚಾರ

ವಿಡಿಯೋ ಹರಿಬಿಟ್ಟವನ ಬಂಧನ

ವಿಡಿಯೋ ಸೆರೆ ಹಿಡಿದು ವೈರಲ್ ಮಾಡಿದ್ದ ಆರೋಪಿ ಜಯಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಮೂಡಬಿದಿರೆ ಠಾಣೆಯಲ್ಲಿ ಆತ್ಮಹತ್ಯೆ ಮತ್ತು ವಿಡಿಯೋ ಹರಿಯಬಿಟ್ಟ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ.

Exit mobile version