Site icon PowerTV

ತೆರೆದ ಟ್ಯಾಂಕರ್​ನಲ್ಲಿ ಸತ್ತು ಬಿದ್ದ ಮಂಗಗಳು: ಅದೇ ನೀರು ಕುಡಿದ ಗ್ರಾಮಸ್ಥರು

ರಾಯಚೂರು : ನೀರಿನ ಟ್ಯಾಂಕರ್‌ನಲ್ಲಿ ಬಿದ್ದು ಎರಡು ಮಂಗಗಳು ಸಾವನ್ನಪ್ಪಿರುವ ಘಟನೆ ದೇವದುರ್ಗ ತಾಲ್ಲೂಕಿನ ಖಾನಾಪುರ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: ಸದನದಲ್ಲಿ ವಿಪಕ್ಷಗಳ ಗ್ಯಾರೆಂಟಿ ಗದ್ದಲ: ಕಲಾಪ ಮುಂದೂಡಿಕೆ

ತೆರೆದ ನೀರಿನ ಟ್ಯಾಂಕರ್ ನಲ್ಲಿ ನೀರು ಕುಡಿಯಲು ಹೋಗಿದ್ದ ಮಂಗಗಳು ಆಯಾತಪ್ಪಿ ಬಿದ್ದು ಮೇಲೆ ಬರಲಾಗದೇ ಸಾವನ್ನಪ್ಪಿದೆ. ಇಂದು ಬೆಳಗ್ಗೆ ಟ್ಯಾಂಕರ್ ಸ್ವಚ್ಚಗೊಳಿಸು ತೆರಳಿದ್ದ ವೇಳೆ ಮಂಗಗಳು ಸತ್ತು ಬಿದ್ದಿರುವುದು ಬೆಳಕಿಗೆ ಬಂದಿದೆ.

ಈ ಘಟನೆಯೂ ಮೂರು ದಿನಗಳ ಹಿಂದೆಯೇ ನಡೆದಿರಬಹುದು ಎಂದು ಶಂಕಿಸಲಾಗಿದೆ, ಕಳೆದ ಮೂರು ದಿನಗಳಿಂದ ಮಂಗಗಳು ಸತ್ತ ಬಿದ್ದ ನೀರನ್ನೇ ಖಾನಾಪುರ ಗ್ರಾಮಸ್ಥರು ಕುಡಿದಿದ್ದು ತೆರದ ಟ್ಯಾಂಕರ್ ಮುಚ್ಚಲು ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದ ಯಮನಾಳ ಗ್ರಾಮ ಪಂಚಾಯ್ತಿ ಪಿಡಿಓ ಹಾಗೂ ಸಿಬ್ಬಂದಿಗಳ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version