Site icon PowerTV

ಅಧಿಕಾರ ಇಲ್ಲದ ಕುಮಾರಸ್ವಾಮಿ, ನೀರಿನಿಂದ ಹೊರಬಿದ್ದ ಮೀನಿನಂತೆ : ಚಲುವರಾಯಸ್ವಾಮಿ ಟಾಂಗ್

ಮಂಡ್ಯ : ಅಧಿಕಾರ ಇಲ್ಲದ ಕುಮಾರಸ್ವಾಮಿ ನೀರಿನಿಂದ ಹೊರಬಿದ್ದ ಮೀನಿನಂತೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಲೇವಡಿ ಮಾಡಿದರು.

ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಬಗ್ಗೆ ಯಾಕೆ ನನ್ನ ಹತ್ತಿರ ಪ್ರಶ್ನೆ ಕೇಳ್ತೀರಪ್ಪಾ..? ಎಂದರು.

ಮೀನನ್ನು ನೀರಿನಿಂದ ಹೊರಕ್ಕೆ ಬಿಟ್ಟ ಹಾಗೆ, ಕುಮಾರಸ್ವಾಮಿ ಅಧಿಕಾರ ಇಲ್ಲದೆ ಹೊದ್ದಾತ್ತಾ ಇದ್ದಾರೆ. ಕುಮಾರಸ್ವಾಮಿ ಅವರನ್ನು ಸ್ವಲ್ಪ ಶಾಂತವಾಗಿ ಇರಲು ಹೇಳ್ರಿ. ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ಅವರ ತಂದೆಯೂ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿ ಆಗಿದ್ದಾರೆ. ಕುಮಾರಸ್ವಾಮಿ ಅನಾವಶ್ಯಕವಾಗಿ ಮಾತನಾಡುತ್ತಾರೆ ಎಂದು ಛೇಡಿಸಿದರು.

ಇದನ್ನೂ ಓದಿ : ಸಿದ್ರಾಮಯ್ಯ ಕುರ್ಚಿ ಖಾಲಿ ಮಾಡಲ್ಲ, ಡಿಕೆಶಿಗೆ ಕುರ್ಚಿ ಸಿಗಲ್ಲ : ಶಾಸಕ ಯತ್ನಾಳ್ ಭವಿಷ್ಯ

ಯತೀಂದ್ರ ಪರ ಬ್ಯಾಟ್

ಇವ್ರು ಅಧಿಕಾರದಲ್ಲಿ ಇದ್ದಾಗ ಇವರ ಫ್ಯಾಮಿಲಿಯವರು ಏನು ಮಾತನಾಡ್ತಾ ಇರಲಿಲ್ವಾ? ಡಾ. ಯತೀಂದ್ರ ಸಿದ್ದರಾಮಯ್ಯ ಹಿಂದೆ ಶಾಸಕರಾಗಿದ್ದವರು. ಈಗ ಅವರು‌ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಯತೀಂದ್ರ ಮಂತ್ರಿಗಳಿಗೆ ಸಲಹೆ ಕೊಡಬಾರದು, ನಮ್ಮ ಜೊತೆ ತೊಡಗಿಸಿಕೊಳ್ಳಬಾರದು ಎನ್ನುವುದು ತಪ್ಪು ಎಂದು ಯತೀಂದ್ರ ಪರ ಬ್ಯಾಟ್ ಬೀಸಿದರು.

ಅವ್ರು ಎಷ್ಟು ವರ್ಗಾವಣೆ ಮಾಡಿದ್ರು?

ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಎಷ್ಟು ವರ್ಗಾವಣೆ ಮಾಡಿದ್ರು ಅನ್ನೋದು ಬಿಡಬೇಕಾ? ವರ್ಗಾವಣೆ ಪ್ರಜಾಪ್ರಭುತ್ವದಲ್ಲಿ ಒಂದು ಪ್ರಕ್ರಿಯೆ. ವರ್ಗಾವಣೆ ಆಗಬೇಕು ಅದು‌ ಆಗುತ್ತದೆ. ಯಾರು ಏನು ಮಾಡಿದ್ರು ಅಂತ ಜನರಿಗೆ ಗೊತ್ತು. ಕುಮಾರಸ್ವಾಮಿ ಅವರ ವಿಚಾರವನ್ನು ನಾವು ಕೆದಕಲು ಹೋಗಲ್ಲ ಎಂದು ಚಾಟಿ ಬೀಸಿದರು.

Exit mobile version