Site icon PowerTV

ಗ್ಯಾರೆಂಟಿ ಸ್ಕೀಂ: ಯಾವುದೇ ಷರತ್ತು ವಿಧಿಸದೇ ಜಾರಿಗೆಒತ್ತಾಯಿಸಿ ಇಂದು ಬಿಜೆಪಿ ಪ್ರತಿಭಟನೆ

ಬೆಂಗಳೂರು : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಏರುವ ಮುನ್ನ ತನ್ನ ಗ್ಯಾರೆಂಟಿಗಳಿಗೆ ಯಾವುದೇ ಷರತ್ತುಗಳನ್ನು ವಿಧಿಸದೇ ಇದೀಗ ಎಲ್ಲಾ ಗ್ಯಾರೆಂಟಿ ಯೋಜನೆಗಳಿಗೂ ಷರತ್ತುಗಳನ್ನು ವಿಧಿಸಿ ರಾಜ್ಯದ ಜನೆತೆಗೆ ವಂಚಿಸುತ್ತಿದೆ ಎಂದು ನಾಳೇ  ಬಿಜೆಪಿ ಪಕ್ಷ ಬೀದಿಗಿಳಿದು ಹೋರಾಟ ಮಾಡಲು ನಿರ್ಧರಿಸಿದೆ.

ಇದನ್ನೂ ಓದಿ :ಕೇಂದ್ರ ಕರ್ನಾಟಕದ ವಿರೋಧಿಯಾಗಿ ನಡೆದುಕೊಳ್ತಿಲ್ಲ : ಮೋದಿ ಪರ ಪ್ರಜ್ವಲ್ ಬ್ಯಾಟಿಂಗ್

ಮಾಜಿ ಸಿಎಂ ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಾಳೆ ಬೆಳಗ್ಗೆ 10.30 ಕ್ಕೆ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ.

ಅಧಿಕಾರಕ್ಕೆ ಬಂದು 24 ಘಂಟೆಗಳಲ್ಲೇ ಯೋಜನೆ ಜಾರಿ ಮಾಡಲಾಗುವುದು ಎಂದಿದ್ದ ಕಾಂಗ್ರೆಸ್ ಸರ್ಕಾರ ಇನ್ನೂ ಸಮರ್ಪಕವಾಗಿ ಜಾರಿ ಮಾಡಿಲಲ್ಲ, ಅನ್ನಭಾಗ್ಯ, ಗೃಹಲಕ್ಷ್ಮಿ, ಸ್ತ್ರೀ ಶಕ್ತಿ, ಯುವನಿಧಿ ಹಾಗೂ ಗೃಹಜ್ಯೋತಿ ಯೋಜನೆಗಳಿಗೆ ಯಾವುದೇ ಕಂಡೀಷನ್‌ಗಳನ್ನು ಹಾಕದೇ ಜಾರಿಗೊಳಿಸುವಂತೆ ಒತ್ತಾಯಿಸಿ ಅಧಿವೇಶನದಲ್ಲಿ ಜನಪ್ರತಿನಿಧಿಗಳು ಹೋರಾಟ ಮಾಡಿದರೇ, ಇತ್ತ ಫ್ರೀಡಂಪಾರ್ಕ್‌ನಲ್ಲಿ ಬಿಜೆಪಿ ನಾಯಕರ ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ.

Exit mobile version