Site icon PowerTV

ವಿಪಕ್ಷ ನಾಯಕನ ಆಯ್ಕೆಗೆ ವೀಕ್ಷಕರ ಟೀಂ ರೆಡಿ

ಬೆಂಗಳೂರು: ರಾಜ್ಯದ ವಿಧಾನಸಭೆಯಲ್ಲಿ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಕೇಂದ್ರದ ವೀಕ್ಷಕರಾಗಿ ಸಚಿವ ಮನಸುಖ್ ಮಾಂಡವೀಯ, ವಿನೋದ್‌ ತಾವೆ, ಜೆಪಿ ನಡ್ಡಾ ಅವರನ್ನು ನೇಮಕ ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಮಾಧ್ಯಮ ಉಸ್ತುವಾರಿ ಮತ್ತು ರಾಷ್ಟ್ರೀಯ ವಕ್ತಾರ ಅನಿಲ್ ಬಲುನಿ ತಿಳಿಸಿದ್ದಾರೆ.

ಹೌದು,ಕೇಂದ್ರದಿಂದ ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್‌ ತಾವೆ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇಮಕ ಮಾಡಿದ್ದಾರೆ.

ಇದನ್ನೂ ಓದಿ: ಚಪ್ಪಲಿ ಹಿಡ್ಕೊಂಡು ಅಥ್ಲೀಟ್ ಬಿಂದುಗೆ ಆವಾಜ್ ಹಾಕಿದ ಕೋಚ್

ವಿಪಕ್ಷ ನಾಯಕನ ಆಯ್ಕೆ ಇಂದೇ ತಿರ್ಮಾನ 

ಇಂದು ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ವಿರೋಧ ಪಕ್ಷ ನಾಯಕ ಇಲ್ಲದೇ ಇರುವ ಸ್ಥಿತಿಯು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.ಈ ಕುರಿತು ಸ್ಪಷ್ಟನೆ ನೀಡಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್‌ ಟೆಂಗಿನಕಾಯಿ ಇಂದೇ ಸರ್ವ ಸಮ್ಮತವಾಗಿ ವಿರೋಧ ಪಕ್ಷದ ನಾಯಕನ ಆಯ್ಕೆ ಆಗುತ್ತದೆ’ ಎಂದು ಹೇಳಿದ್ದಾರೆ.

ಇನ್ನೂ ಅನಿಲ್ ಬಲುನಿಯವರು ಬೆಂಗಳೂರಿಗೆ ತೆರಳಲಿದ್ದು,ವಿರೋಧ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆಗೆ ಸಾಕ್ಷಿಯಾಲಿದ್ದಾರೆ.

 

 

Exit mobile version