Site icon PowerTV

ಕಾರು ಡ್ರೈವರ್ ಗೆ ಹೆಲ್ಪ್ ಮಾಡಲು ಹೋದ ಕಾನ್ಸ್‌ಟೇಬಲ್ ದಾರುಣ ಸಾವು

ಬೆಂಗಳೂರು: ಕೆಟ್ಟು ನಿಂತಿದ್ದ ಕಾರು ಪರಿಶೀಲನೆ ಮಾಡಲು ಹೋಗಿದ್ದ ದೇವನಹಳ್ಳಿ ಠಾಣೆಯ ಕಾನ್‌ಸ್ಟೆಬಲ್‌ ದುರಂತ ಅಂತ್ಯ ಕಂಡಿದ್ದು,ಕೂದಲೆಳೆ ಅಂತರದಲ್ಲಿ ಇನ್ಸ್‌ಪೆಕ್ಟರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹೌದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಚಿಕ್ಕಜಾಲ ಬಳಿಯ ಹೆದ್ದಾರಿಯಲ್ಲಿ ಕೆಟ್ಟ ನಿಂತಿದ್ದ ಕಾರನ್ನು ಪರಿಶೀಲನೆ ಮಾಡಲು ಹೋಗಿ ಸಾವನಪ್ಪಿರುವ ಘಟನೆ ನಡೆದಿದೆ.

 ಘಟನೆ ನಡೆದಿದ್ದು ಹೇಗೆ?

ಭಾನುವಾರ ರಾತ್ರಿ ದೇವನಹಳ್ಳಿ ಇನ್ಸ್‌ಪೆಕ್ಟರ್ ಧರ್ಮಗೌಡ ಮತ್ತು ಜೀಪ್ ಡ್ರೈವ್ ಮಾಡುತ್ತಿದ್ದ ಕಾನ್‌ಸ್ಟೆಬಲ್‌ ಸುರೇಶ್‌, ಹೆದ್ದಾರಿ ಬದಿಯಲ್ಲಿ ಕೆಟ್ಟು ನಿಂತಿದ್ದ ಕಾರು ಪರಿಶೀಲನೆಗೆ ತೆರಳಿದ್ದಾರೆ. ಆ ವೇಳೆ ಇನ್ನೊಂದು ಕಾರು ಬಂದು ಡಿಕ್ಕಿ ಹೊಡೆದಿದೆ. ಕಾನ್‌ಸ್ಟೆಬಲ್ ಸುರೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದು. ಫೋನ್ ನಲ್ಲಿ ಮಾತನಾಡುತ್ತಾ ಪಕ್ಕದಲ್ಲಿ ನಿಂತಿದ್ದ ಇನ್‌ಸ್ಪೆಕ್ಟರ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಇದನ್ನೂ ಓದಿ: ಯುವಕನ ಕಿರುಕುಳಕ್ಕೆ ಬೇಸತ್ತ ಯುವತಿ; ವಿಷ ಸೇವಿಸಿ ಆತ್ಮಹತ್ಯೆ

ಕುಡಿದ ಮತ್ತಿನಲ್ಲಿದ್ದ ಯುವಕ ಯುವತಿಯರಿಗೂ ಗಂಭೀರ ಗಾಯ

ಡಿಕ್ಕಿ ಹೊಡೆದ ಕಾರಿನಲ್ಲಿ ಮೂವರು ಯುವಕರು ಹಾಗೂ ಮೂವರು ಯುವತಿಯರಿದ್ದು, ರಾತ್ರಿಯೆಲ್ಲ ಪಾರ್ಟಿ ಮಾಡಿ ಮುಂಜಾನೆ ನಂದಿ ಬೆಟ್ಟಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಡಿಕ್ಕಿ ಹೊಡೆದ ಕಾರಿನ ಚಾಲಕನ ಕೈ ಕಾಲು ಮುರಿದಿವೆ. ಕುಡಿದ ಮತ್ತಿನಲ್ಲಿದ್ದ ಯುವಕ ಯುವತಿಯರಿಗೂ ಸಹ ಗಂಭೀರ ಗಾಯಗಳವಾಗಿವೆ ಎಂದು ಮಾಹಿತಿ ತಿಳಿದು ಬಂದಿದೆ. ಚಿಕ್ಕಜಾಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Exit mobile version