Site icon PowerTV

ಹಣ ಪಡೆದು ಸಿನಿಮಾ ಮಾಡ್ತಿಲ್ಲ; ಕಿಚ್ಚ ಸುದೀಪ್ ವಿರುದ್ದ ನಿರ್ಮಾಪಕ ಆರೋಪ

ಬೆಂಗಳೂರು: ಚಿತ್ರದಲ್ಲಿ ನಟಿಸುವುದಾಗಿ ಹಣ ಪಡೆದ ನಟ ಕಿಚ್ಚ ಸುದೀಪ್ ಈಗ ನಮ್ಮ ಚಿತ್ರದಲ್ಲಿ ನಟನೆಯೂ ಮಾಡದೇ ಹಣವನ್ನೂ ವಾಪಾಸ್ ನೀಡದೇ  ಸತಾಯಿಸುತ್ತಿದ್ದಾರೆ ಎಂದು ನಿರ್ಮಾಪಕ ಎಂ.ಎನ್ ಕುಮಾರ್ ಗಂಭೀರ ಆರೋಪ ಮಾಡುತ್ತಿದ್ದಾರೆ.

ಇದನ್ನೂ ಓದಿ: ಯುವಕನ ಕಿರುಕುಳಕ್ಕೆ ಬೇಸತ್ತ ಯುವತಿ; ವಿಷ ಸೇವಿಸಿ ಆತ್ಮಹತ್ಯೆ

ವಾಣಿಜ್ಯ ಮಂಡಳಿ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುತ್ತತ್ತಿ ಸತ್ಯ ಚಿತ್ರದಲ್ಲಿ ನಟಿಸುವುದಕ್ಕಾಗಿ 8ವರ್ಷಗಳ ಹಿಂದೆ ಅಡ್ವಾನ್ಸ್ ಹಣ ನೀಡಿದ್ದೆ ಅವರಿಗೆ ಬೇಕಾದಾಗ ಸಿನಿಮಾ ಮಾಡಲು ಬರುತ್ತಾರೆ, ಆದರೀಗ ಸಿನಿಮಾ ಮಾಡಲು ಒಪ್ಪುತ್ತಿಲ್ಲ,  ಹಣ‌ ಕೊಟ್ಟು ಬೇಡುವಂತ ಸ್ಥಿತಿ ಎದುರಾಗಿದೆ.

ಇದುವರೆಗೆ ಆರು ಪತ್ರಗಳನ್ನು ಕೊಟ್ಟರೂ ಕೇವಲ ಒಂದು ಪತ್ರಕ್ಕೆ ಮಾತ್ರ ಉತ್ತರ ಸಿಕ್ಕಿದೆ, ಸುದೀಪ್ ಪತ್ನಿ ಪ್ರಿಯಾ ಸುದೀಪ್ ಬಳಿಯೋ ಅಳಲು ತೋಡಿಕೊಂಡಿದ್ದೆವು ಆದರೇ ಯಾವುದೇ ಪ್ರಯೋಜನವಾಗಿಲ್ಲ, ಇಷ್ಟ ಇಲ್ಲ ಎಂದ ಮೇಲೆ ನಮ್ಮ ಜೊತೆ ವ್ಯವಹಾರ ಮಾಡವುದು ಬೇಡ, ನಮ್ಮ ದುಡ್ಡು ನಮಗೆ ವಾಪಾಸ್ ಕೊಡ್ಲಿ ಸಾಕು ಅವರಿಗೂ ನಮಗೂ ಸಂಬಂದ ಇಲ್ಲ ಎಂದಿದ್ದಾರೆ.

Exit mobile version