Site icon PowerTV

ಸಿನಿಮಾ ಡೈಲಾಗ್ ಹೊಡೆದು ಗೆದ್ದು ಬಿಟ್ರೆ ಸಾಕಾ? : ಪ್ರದೀಪ್ ಈಶ್ವರ್​ಗೆ ಸುಧಾಕರ್ ಪಂಚ್

ಚಿಕ್ಕಬಳ್ಳಾಪುರ : ಕೇವಲ ಸಿನಿಮಾ ಡೈಲಾಗ್ ಹೊಡೆದು ಗೆದ್ದು ಬಿಟ್ಟರೆ ಸಾಕಾ? ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್​ಗೆ ಮಾಜಿ ಸಚಿವ ಡಾ.ಕೆ ಸುಧಾಕರ್ ಕುಟುಕಿದರು.

ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಸತಿ ಯೋಜನೆಗಳ ಬಗ್ಗೆ ಹೊಸ ಶಾಸಕರು ಅಭಿಯಾನ ಮಾಡ್ತಾ ಇದಾರೆ ಎಂದು ಕಾಲೆಳೆದರು.

ಇಡೀ ರಾಜ್ಯದಲ್ಲಿ 20 ಸಾವಿರ ಸೈಟ್ ಕೊಡುವ ಕೆಲಸ ಯಾರಾದರೂ ಮಾಡಿದ್ದರೆ ತಿಳಿಸಲಿ. ಸುಳ್ಳು ನಿವೇಶನಗಳನ್ನು ಕೊಡ್ತಾರೆ ಅಂತ ಸುಳ್ಳು ಪ್ರಚಾರ ಮಾಡ್ತಾ ಇದ್ದೀರಾ? ಹಕ್ಕುಪತ್ರ ಯಾವುದು, ಮಂಜೂರಾತಿ ಪತ್ರ ಯಾವುದು ಅಂತ ಗೊತ್ತಿಲ್ಲ‌. ಕೇವಲ ಸಿನಿಮಾ ಡೈಲಾಗ್ ಹೊಡೆದು ಗೆದ್ದಬಿಟ್ಟರೆ ಸಾಕಾ? ಎಂದು ಛೇಡಿಸಿದರು.

ಇದನ್ನೂ ಓದಿ : ನಾನು ಸೋತಿದ್ರೆ ಕೋರ್ಟ್ ಪಕ್ಕನೇ ಮನೆ ಮಾಡಬೇಕಿತ್ತು : ಪ್ರದೀಪ್ ಈಶ್ವರ್

ದೀಪ ಹಚ್ಚಿದ್ರೂ ಹಚ್ಚಬಹುದು ಗಿರಾಕಿ!

ನಾನು ಹಕ್ಕುಪತ್ರಗಳಲ್ಲಿ ಸುಳ್ಳು ಭರವಸೆ ನೀಡಿದ್ರೆ ನಂದಿ ದೇವಸ್ಥಾನದಲ್ಲಿ ದೀಪ ಹಚ್ಚುತ್ತೇನೆ. ತಾಕತ್ತಿದ್ದರೆ ಅದು ಸುಳ್ಳು ಎಂದು ದೀಪ ಹಚ್ಚು ನೋಡೋ‌ಣ. ಹಚ್ಚಿದ್ರೂ ಹಚ್ಚಬಹುದು ಗಿರಾಕಿ! ವಿಧಾನಮಂಡಲ ಅಧಿವೇಶನದಲ್ಲಿ ಈ ಜಿಲ್ಲೆಯ ಬಗ್ಗೆ ಗಮನ ಸೆಳೆಯಿರಿ. ದ್ವೇಷ ರಾಜಕಾರಣ ಬಿಟ್ಟು ಜಿಲ್ಲೆಯ ಅಭಿವೃದ್ದಿಗೆ ಶ್ರಮವಹಿಸಿ ಎಂದು ಚಾಟಿ ಬೀಸಿದರು.

ಬೋರ್ಡ್​ಗಳಲ್ಲಿ ಬೇಗ ನಿಮ್ಮ ಹೆಸರು ಹಾಕಿಸಿಕೊಳ್ಳಿ

ಜಿಲ್ಲೆಯಲ್ಲಿ ಉದ್ಘಾಟನೆಗೆ ಸಿದ್ದವಾಗಿರುವ ಕಟ್ಟಡಗಳನ್ನು ಉದ್ಘಾಟನೆ ಮಾಡಿ. ಬೋರ್ಡ್​ಗಳಲ್ಲಿ ಬೇಗ ಬೇಗ ನಿಮ್ಮ ಹೆಸರುಗಳನ್ನು ಹಾಕಿಸಿಕೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್ ಹಾಗೂ ಶಾಸಕ ಪ್ರದೀಪ್ ಈಶ್ವರ್​ಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.

Exit mobile version