Site icon PowerTV

ನನ್ಗೆ ಟಿಕೆಟ್ ಕೊಡಲ್ಲ ಅಂತ ನಮ್ಮವ್ರು ಯಾರಾದ್ರೂ ಹೇಳಿದ್ದಾರಾ? : ಪ್ರಜ್ವಲ್ ಸಿಡಿಮಿಡಿ

ಹಾಸನ : ಹಾಸನ ಲೋಕಸಭಾ ಟಿಕೆಟ್ ‘ಕೈ’ ತಪ್ಪುತ್ತಾ ಎಂಬ ಪ್ರಶ್ನೆಗೆ ಸಂಸದ ಪ್ರಜ್ವಲ್ ರೇವಣ್ಣ ಕೆಂಡಾಮಂಡಲ ಆಗಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನ್‌ವಾಂಟೆಡ್ ವಿಚಾರಗಳಿಗೆ ಪ್ರಚಾರ ಕೊಡಲು ನಾನು ಇಷ್ಟಪಡೋದಿಲ್ಲ ಎಂದು ಗರಂ ಆಗಿದ್ದಾರೆ.

ಪ್ರಜ್ವಲ್ ರೇವಣ್ಣಗೆ ಟಿಕೆಟ್ ಕೊಡಲ್ಲ ಅಂತಾ‌ ಯಾರಾದ್ರೂ ಹೇಳಿದ್ದಾರಾ? ಹೇಳಿದ್ರೆ ಆ ದಾಖಲಾತಿಯನ್ನು ಮಾಧ್ಯಮದವರು ಕೊಡಿ. ಆಗ ನಾನು ಉತ್ತರ ಕೊಡುತ್ತೇನೆ. ನಿಮ್ಮ ಉಹಾಪೋಹಗಳಿಗೆ ನಾನು ಉತ್ತರ ಕೊಡೋದಕ್ಕೆ ಆಗೊಲ್ಲ ಎಂದು ಸಿಟ್ಟಾಗಿದ್ದಾರೆ.

ಇದನ್ನೂ ಓದಿ : ನಾವು ನಮ್ಮ ಭಾವನೆ ಹೇಳ್ತೀವಿ, ನೀವು ಬೆಂಕಿ ಹಚ್ಚಬೇಡಿ : ಶಾಸಕ ಯತ್ನಾಳ್ ಟಕ್ಕರ್

ಹೆಸರು ಹೇಳೋಕೆ ಇಷ್ಟ ಪಡಲ್ಲ

ನಮ್ಮ ಪಾರ್ಟಿಯವು ಯಾರಾದ್ರೂ ಹೇಳಿದ್ದಾರಾ? ಹೆಚ್.ಡಿ ರೇವಣ್ಣ ಸಾಹೇಬ್ರು ಕೂಡ ಟಿಕೆಟ್ ಕೊಡಲ್ಲ ಅಂತ ಹೇಳಿಲ್ಲ. ಯಾವುದೋ ಒಂದು ಮಾಧ್ಯಮ, ಅದರ ಹೆಸರು ಹೇಳಲು ಇಷ್ಟ ಪಡೊಲ್ಲ. ಆ ಮಾಧ್ಯಮದಲ್ಲಿ ಬಂದಮೇಲೆ ಈ ರೀತಿ ನೀವು ಪ್ರಶ್ನೆ ಕೇಳಿದ್ದೀರಿ ಎಂದು ಅಸಮಾಧಾನ ಹೊರಹಾಕಿದ್ದಾರೆ.

ರೇವಣ್ಣನವು ಹೇಳಿದ್ರೆ ಅವರನ್ನೇ ಕೇಳಿ

ನೀವು ಆ ಪ್ರಶ್ನೆಯನ್ನು ಹುಟ್ಟು ಹಾಕಿದ್ದೀರಿ. ಆ ಮೇಲೆ ಅವರು ಉತ್ತರ ಕೊಟ್ಟಿದ್ದಾರೆ. ನಮ್ಮ ಪಾರ್ಟಿಯ ಪ್ರಮುಖರು ಯಾರಾದ್ರೂ, ಎಲ್ಲಾದ್ರೂ ಪ್ರಜ್ವಲ್ ರೇವಣ್ಣ‌ಗೆ ಟಿಕೆಟ್ ‌ಕೊಡಲ್ಲ‌ ಅಂತ ಹೇಳಿಕೆ ನೀಡಿದ್ದಾರೆಯೇ? ರೇವಣ್ಣನವು ಹೇಳಿದ್ರೆ ಅವರನ್ನೇ ಕೇಳ್ಕೊಳ್ಳಿ ಎಂದು ಪ್ರಜ್ವಲ್ ಬೇಸರ ಹೊರಹಾಕಿದ್ದಾರೆ.

Exit mobile version