Site icon PowerTV

ದೇವೇಗೌಡ್ರ ಕುಟುಂಬದಿಂದ ಬಂದವ್ರು ಇಂಥ ಹೇಳಿಕೆ ಕೊಡ್ತಿದ್ದಾರೆ : ವಿ.ಎಸ್ ಉಗ್ರಪ್ಪ

ಬೆಂಗಳೂರು : ದೇವೇಗೌಡರ ಕುಟುಂಬದಿಂದ ಬಂದು ಇಂತಹ ಹೇಳಿಕೆ ಕೊಡ್ತಿದ್ದಾರೆ ಎಂದು ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಕಿಡಿಕಾರಿದರು.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ರಚನೆಯಿಂದ ಹತಾಶೆಯಾಗಿ ಕುಮಾರಸ್ವಾಮಿ ಇಂಥ ಹೇಳಿಕೆ ನೀಡುತ್ತಿದ್ದಾರೆ ಎಂದು ಛೇಡಿಸಿದರು.

ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ಬರುತ್ತೆ ಅಂತ ಕುಮಾರಸ್ವಾಮಿ ಕಾಯುತ್ತಿದ್ದರು. ಸಿಂಗಾಪುರದಿಂದ ಎಲ್ಲಾ ಮ್ಯಾನೇಜ್ ಮಾಡೋಣ ಅಂತಿದ್ರು. ಆದ್ರೆ, ರಾಜ್ಯದಲ್ಲಿ ಕಾಂಗ್ರೆಸ್ ಬಹುಮತ ಪಡೆದುಕೊಂಡು ಸರ್ಕಾರ ರಚನೆ ಮಾಡಿದೆ. ಕುಮಾರಸ್ವಾಮಿ ಅವರ ಫ್ಯಾಮಿಲಿಯಿಂದ ಮೂರು ಬಾರಿ ಸಿಎಂ ಆಗಿದ್ದಾರೆ. ಅವರ ತಂದೆ ಹೆಚ್.ಡಿ ದೇವಗೌಡರು ಒಂದು ಬಾರಿ ಪ್ರಧಾನಿ ಆಗಿದ್ರು. ಇವರು ಇಂಥ ಹೇಳಿಕೆ ನೀಡಬಾರದು ಎಂದು ಚಾಟಿ ಬೀಸಿದರು.

ಇದನ್ನೂ ಓದಿ : ಇನ್ನು ಎಷ್ಟು ದಿನ ಜನರನ್ನ ಭಿಕ್ಷುಕರ ರೀತಿ ಇಡ್ತೀರಾ? : ಕುಮಾರಸ್ವಾಮಿ ಕಿಡಿ

25 ಸಂಸದರು ಯಾಕೆ ಮಾತಾಡ್ತಿಲ್ಲ?

ನಮ್ಮ ಕಾಂಗ್ರೆಸ್ ಸರ್ಕಾರ ಅಕ್ಕಿ ಬದಲು ದುಡ್ಡು ನೀಡುವುದಕ್ಕೆ ಮುಂದಾಗಿದೆ. ಕೇಂದ್ರ ಸರ್ಕಾರದ ಬಳಿ ಅಕ್ಕಿ ದಾಸ್ತಾನು ಇದೆ. ಆದರೂ ನಮಗೆ ಅಕ್ಕಿ ಕೊಡ್ತಿಲ್ಲ. ಅಕ್ಕಿ ವಿಚಾರದಲ್ಲಿ 25 ಸಂಸದರು ಇದರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ? ಬಿಜೆಪಿ ಬಡವರ ಹೊಟ್ಟೆ ಮೇಲೆ ಹೊಡೆದು ರಾಜಕಾರಣ ಮಾಡುತ್ತಿದೆ. ಬಿಜೆಪಿ ಅವರಿಗೆ ಪಕ್ಷ ನಿಷ್ಠೆ ಇಲ್ಲ. ಅಂಥವರಿಗೆ ಸಮಾಜದ ಬಗ್ಗೆ ನಿಷ್ಠೆ ಇರುತ್ತಾ? ಇದು ಬಿಜೆಪಿ ಅವರ ರಾಜ್ಯ ವಿರೋಧಿ ಪ್ರವೃತ್ತಿ ತೋರಿಸುತ್ತಿದೆ ಎಂದು ಕುಟುಕಿದರು.

Exit mobile version