Site icon PowerTV

ಮನೆ ಬಾಗಿಲು ಮುರಿದ ಕಳ್ಳರು ಕೋಟ್ಯಾಂತರ ಮೌಲ್ಯದ ಚಿನ್ನಾಭಣರ, ನಗದು ದೋಚಿ ಪರಾರಿ

ಆನೇಕಲ್ : ಮನೆಯ ಬಾಗಿಲು ಮುರಿದು ಕಳ್ಳರು ಕೋಟ್ಯಾಂತರ ರೂಪಾಯಿ ಮೌಲ್ಯದ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ  ತಾಲ್ಲೂಕಿನ ಸೂರ್ಯನಗರದಲ್ಲಿ ನಡೆದಿದೆ.

ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿದ ಕಳ್ಳರು ಮನೆಗೆ ನುಗ್ಗಿ ಲಾಕರ್ ನಲ್ಲಿದ್ದ 53 ಲಕ್ಷ ನಗದು, ಒಂದು ಕೆಜಿ ಚಿನ್ನಾಭರಣ, ಆರು ಕೆಜಿ ಬೆಳ್ಳಿ ವಸ್ತುಗಳ ಜೊತೆಗೆ ಮನೆಯಲ್ಲಿದ್ದ ಸಿಸಿಟಿವಿಯ ಡಿವಿಆರ್ ಸಮೇತ ಕದ್ದು ಪರಾರಿಯಾಗಿದ್ಧಾರೆ.

ಇದನ್ನೂ ಓದಿ: ಜಾತಿಗಣತಿ ನಿರ್ಧಾರ ಪಡೆದೆ ತೀರ್ತೆನೆ : ಸಿಎಂ ಸಿದ್ದರಾಮಯ್ಯ ಶಪಥ

ಘಟನೆಯ ಹಿನ್ನೆಲೆ: ಶಶಿಧರ್ ಎಂಬುವವವರು ಜೂನ್ 28 ರಂದು ತಮ್ಮ ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತರಾಗಿ ತುಮಕೂರಿನ ಸಿದ್ದಗಂಗಾವಮಠಕ್ಕೆ ಹೋಗಿದ್ದಾಗ ಹೊಂಚು ಹಾಕಿ ಮನೆಯ ಬಾಗಿಲು ಹೊಡೆದು ಒಳ ನುಗ್ಗಿದ ಕದೀಮರು  ಲಾಕರ್ ನಲ್ಲಿಟ್ಟಿದ್ದ ಕೋಟ್ಯಾಂತರ ಮೌಲ್ಯದ ಹಣ ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಶಶಿಧರ್ ಸಹೋದರಿ ಮನೆಗೆ ಬಂದು ನೋಡಿದಾಗ ಬಾಗಿಲು ತೆರೆದಿರುವುದು ಕಂಡು ಗಾಬರಿಯಾಗಿ ಕೂಡಲೇ ತಮ್ಮ ಸಹೋದರ ಶಶಿಧರ್​ಗೆ ಮಾಹಿತಿ ನೀಡಿದ್ದಾರೆ.

 

Exit mobile version