Site icon PowerTV

ಶಿವಮೊಗ್ಗದಲ್ಲಿ ಹಾವು ಕಚ್ಚಿ ಮಹಿಳೆ ಸಾವು

ಶಿವಮೊಗ್ಗ : ಹಾವು ಕಚ್ಚಿ ಮಹಿಳೆ ಸಾವನ್ನಪ್ಪಿರುವ ಘಟನೆ ಹೊಸನಗರ ತಾಲೂಕಿನಲ್ಲಿ ಸಂಭವಿಸಿದೆ. ತಾಲೂಕಿನ ಕೆ.ಕೆ.ಹುಣಸವಳ್ಳಿ ಗ್ರಾಮದ ಜಯಮ್ಮ (72) ಮೃತ ದುರ್ದೈವಿಯಾಗಿದ್ದಾರೆ.

ಜಾನುವಾರುಗಳಿಗೆ ಮೇವಿಗಾಗಿ ಹುಲ್ಲನ್ನು ಕೊಯ್ಯುವ ವೇಳೆಯಲ್ಲಿ ದುರ್ಘಟನೆ ನಡೆದಿದೆ. ಜಯಮ್ಮ ತಮ್ಮ ಮನೆ ಹಿಂಬಾಗದ ಅಡಿಕೆ ತೋಟದಲ್ಲಿ ಹುಲ್ಲು ಕೊಯ್ಯುವ ವೇಳೆ ಹಾವು ಕಚ್ಚಿದೆ.

ಹಾವು ಕಚ್ಚಿದ ತಕ್ಷಣ ಆಸ್ಪತ್ರೆಗೆ ಸಾಗಿಸುವ ಮಾರ್ಗದ ಮಧ್ಯೆದಲ್ಲಿ ನೋವು ತಾಳಲಾರದೆ ಮಹಿಳೆ ಜಯಮ್ಮ ಕೊನೆಯುಸಿರೆಳೆದಿದ್ದಾರೆ. ಮೃತ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ರಿಪ್ಪನ್​ಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

Exit mobile version