Site icon PowerTV

ಪ್ರತಾಪ್ ಸಿಂಹ ಬಗ್ಗೆ ಅವಹೇಳನಕಾರಿ ಪೋಸ್ಟ್ : ಟ್ರಾಫಿಕ್ ಹೆಡ್‌ ಕಾನ್ಸ್‌ಟೇಬಲ್‌ ಅಮಾನತು

ಮೈಸೂರು : ಸಂಸದ ಪ್ರತಾತ್‌ ಸಿಂಹ ಅವರ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಹಿನ್ನಲೆಯಲ್ಲಿ ಹೆಡ್ ಕಾನ್‌ಸ್ಟೇಬಲ್ ಅನ್ನು ಅಮಾನತು ಮಾಡಲಾಗಿದೆ.

ನಗರದ ವಿವಿ.ಪುರಂ ಟ್ರಾಫಿಕ್ ಪೊಲೀಸ್ ಠಾಣೆಯ ಮುಖ್ಯ ಪೇದೆ ಬಿ. ಪ್ರಕಾಶ್ ಅಮಾನತು ಆಗಿದ್ದಾರೆ. ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಪ್ರದೀಪ್ ಈಶ್ವರ್ ಅವರ ವೀಡಿಯೋ ವೈರಲ್ ಆಗಿತ್ತು. ಈ ವೀಡಿಯೋಗೆ ಹೆಡ್ ಕಾನ್‌ಸ್ಟೇಬಲ್ ಪ್ರಕಾಶ್ ಕಾಮೆಂಟ್ ಹರಿಬಿಟ್ಟಿದ್ದರು.

ಇದನ್ನೂ ಓದಿ : ಚೇಲಾಗಿರಿ ಮಾಡಿ ಪ್ರತಾಪ್ ಸಿಂಹಗೆ ಅನುಭವವಿರಬೇಕು: ಎಂ.ಬಿ ಪಾಟೀಲ್​ 

ಕಮಿಷನರ್​​ಗೆ ಪ್ರತಾಪ್ ಸಿಂಹ ದೂರು

ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಫೇಸ್‌ಬುಕ್‌ನಲ್ಲಿ ಬಿ. ಪ್ರಕಾಶ್ ಅವಹೇಳನಕಾರಿ ಪೋಸ್ಟ್ ಹಾಕಿದ್ದರು. ಇದನ್ನು ಗಮನಿಸಿದ ಸಂಸದ ಪ್ರತಾಪ ಸಿಂಹ ಪೊಲೀಸ್ ಕಮಿಷನರ್​​ಗೆ ದೂರು ನೀಡಿದ್ದರು. ಪೇದೆ ಹಾಕಿದ್ದ ಕಮೆಂಟ್ ಸ್ಕ್ರೀನ್​ಶಾಟ್ ನೀಡಿ, ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರು. ಈ ಹಿನ್ನಲೆಎಯಲ್ಲಿ ಇಲಾಖೆ ವಿಚಾರಣೆ ಬಾಕಿ ಇರಿಸಿ ಬಿ. ಪ್ರಕಾಶ್ ಅವರನ್ನು ಸಸ್ಪೆಂಡ್ ಮಾಡಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಆದೇಶಿಸಿದ್ದಾರೆ.

ಕಮೆಂಟ್ ನಲ್ಲಿ ಏನಿತ್ತು?

ಪ್ರದೀಪ್ ಸರ್, ಹೆಂಡತಿಯನ್ನು ತಂಗಿ ಅಂತ ಹೇಳಿಕೊಂಡು ಎರಡೆರಡು ಮುಡಾ ಸೈಟ್ ತೆಗೆದುಕೊಂಡು ರಾಜ್ಯ ಸರ್ಕಾರಕ್ಕೆ ದ್ರೋಹ ಮಾಡಿರುವ ಅಯೋಗ್ಯ ಅವನು ಎಂದು ಫೇಸ್ ಬುಕ್ ನಲ್ಲಿ ಕಮೆಂಟ್ ಹರಿಬಿಟ್ಟಿದ್ದರು.

Exit mobile version