Site icon PowerTV

ನಾಳೆ ವಿಧಾನಸಭಾ ಜಂಟಿ ಅಧಿವೇಶನ, ವಿರೋಧ ಪಕ್ಷಗಳ ಅಸ್ತ್ರವಾಗಿ ಗ್ಯಾರೆಂಟಿ ಯೋಜನೆಗಳ ಬಳಕೆ

ಬೆಂಗಳೂರು : ರಾಜ್ಯ ವಿಧಾನಸಭೆಯ ಜಂಟಿ ಅಧಿವೇಶನ ಜು.3, ನಾಳೆಯಿಂದ ಪ್ರಾರಂಭವಾಗಲಿದ್ದು ಉಭಯ ಸದನವನ್ನುದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಬಳಿಕ ಸದನದ ಕಲಾಪ ಆರಂಭವಾಗಲಿದೆ.

ಇದನ್ನೂ ಓದಿ : ನಂದಿ ಗಿರಿಧಾಮಕ್ಕೆ ಎರಡು ದಿನ ಪ್ರವಾಸಿಗರ ನಿಷೇಧ

ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಅನುಷ್ಟಾನ ಸಮಸ್ಯೆ ಮುಂದಿಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಭರ್ಜರಿ ತಯಾರಿ ನಡೆಸಿದೆ. ಇದೇ ವೇಳೆ ವಿರೋಧ ಪಕ್ಷದ ಅವಧಿಯಲ್ಲಿ ನಡೆದ ಭ್ರಷ್ಟಾಚಾರ ಹಗರಣ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿ ವಿಪಕ್ಷ ನಾಯಕರನ್ನು ಮುಜುಗರಕ್ಕೀಡುಮಾಡಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.

ರಾಜ್ಯ ಬಜೆಟ್ ನ್ನು ಜು. 7 ರಂದು ಸಿಎಂ ಸಿದ್ದರಾಮಯ್ಯ ಮಂಡನೆ ಮಾಡಲಿದ್ದು ಬಜೆಟ್ ಪೂರ್ವಾಪರ ಚರ್ಚೆಗಳು ನಾಳಿನ ಕಲಾಪದಲ್ಲಿ ಚರ್ಚೆಗೆ ಬರಲಿದೆ.

 

Exit mobile version