Site icon PowerTV

ಕುಡಿಯುವ ನೀರಿಗಾಗಿ ಬಿಂದಿಗೆ ಹಿಡಿದು ಮಹಿಳೆಯರ ಆಕ್ರೋಶ

ಗದಗ: ಬೆಟಗೇರಿ ಅವಳಿ ನಗರದಲ್ಲಿ ಕುಡಿಯುವ ನೀರಿಗೆ ಮತ್ತೆ ಹಾಹಾಕಾರ ಶುರುವಾಗಿದ್ದು ಬಿಂದಿಗೆ ಹಿಡಿದ ಮಹಿಳೆಯರು ನಗರಸಭೆ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ದೇವೇಗೌಡ್ರ ಕುಟುಂಬದಿಂದ ಬಂದವ್ರು ಇಂಥ ಹೇಳಿಕೆ ಕೊಡ್ತಿದ್ದಾರೆ : ವಿ.ಎಸ್ ಉಗ್ರಪ್ಪ

ಮೊದಲು ಜನಕ್ಕೆ ಕುಡಿಯಲು ನೀರು ಕೊಡಿ, ಬಳಿಕ ಉಚಿತ ಭಾಗ್ಯಗಳ ಬಗ್ಗೆ ಮಾತನಾಡಿ ನಮ್ಮ ಊರಿನಲ್ಲಿ ಕುಡಿಯುವ ನೀರಿಗೆ ಆಹಾಕಾರ ಇದ್ದು ಕುಡಿಯುವ ನೀರನ್ನು ತಿಂಗಳಗಟ್ಟಲೇ ಸಂಗ್ರಹಿಸಿಟ್ಟು ಹುಳುಗಳು ಬಿದ್ದರು ಸೋಸಿ ಕುಡಿಯುವ ಪರಿಸ್ಥಿನಿ ನಿರ್ಮಾಣವಾಗಿದೆ ಇದರಿಂದ ಜನರ ಆರೋಗ್ಯ ಕೆಡುತ್ತಿದೆ ಎಂದು ನಗರದ ಖಾನತೋಟದ ಮಹಿಳೆಯರು ಇಂದು ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿ

ಗದಗದಲ್ಲಿ 24/7  ಯೋಜನೆ ತಂದರು ನಲ್ಲಿಯಲ್ಲಿ ನೀರಿಲ್ಲ ಹೆಸರಿಗಷ್ಟೇ ನಿರಂತರ  ಯೋಜನೆ ಒಂದು ದಿನವೂ ನೀರು ಬಂದಿದ್ದು ಕಂಡಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

Exit mobile version