Site icon PowerTV

ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಅವಘಡ : ಸುಟ್ಟು ಭಸ್ಮವಾದ ನಗದು,ಚಿನ್ನಾಭರಣ

ಕಲಬುರಗಿ : ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ ಹತ್ತಿ ನಗದು/ಚಿನ್ನಾಭರಣಗಳು ಬೆಂಕಿಗಾಹುತಿಯಾಗಿರುವ ದುರ್ಘಟನೆ ಸಂಭವಿಸಿದೆ.ಕಲಬುರಗಿಯ ಶಹಬಾದ್ ತಾಲೂಕಿನ ಬಾಲುನಾಯಕ್ ತಾಂಡಾದಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಇಡೀ ಮನೆಗೆ ಬೆಂಕಿ ವ್ಯಾಪಿಸಿದೆ.

ಬೆಂಕಿಯ ರಭಸಕ್ಕೆನಗದು,ಚಿನ್ನಾಭರಣ,ಧಾನ್ಯಗಳು ಸೇರಿದಂತೆ ಮನೆಯಲಿದ್ದ ಇನ್ನಿತರ ಅವಶ್ಯಕ ಸಾಮಗ್ರಿಗಳು ಸುಟ್ಟು ಭಸ್ಮವಾಗಿವೆ. ದತ್ತು ಚೌವ್ಹಾಣ್ ಎಂಬುವರಿಗೆ ಸೇರಿದ ಮನೆಯಲ್ಲಿ ಯಾರೂ ಇರದಿದ್ದಾಗ ವಿದ್ಯುತ್ ಅವಘಡ ನಡೆದಿದೆ.

ಬೆಂಕಿಯನ್ನು ನಂದಿಸಲು ಸ್ಥಳೀಯರು ಹರಸಾಹಸ ಪಟ್ಟರೂ ಹತೋಟಿಗೆ ಬಾರದ ಬೆಂಕಿಯಿಂದ ವಸ್ತುಗಳು ಸುಟ್ಟು ಕರಕಲಾಗಿವೆ. ಘಟನೆಯ ಕುರಿತು ಮಾಡಬೂಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version