Site icon PowerTV

ಕಾರ್ಮಿಕನಿಂದ ಲಂಚ ಪಡೆಯುವಾಗ ಮಹಿಳಾ ಅಧಿಕಾರಿ ಲೋಕಾಯುಕ್ತ ಬಲೆಗೆ

ಹಾವೇರಿ : ರಾಜ್ಯದಲ್ಲಿ ಅತ್ಯಂತ ಕ್ರೀಯಾಶೀಲವಾಗಿರುವ ಲೋಕಾಯುಕ್ತ ಇಲಾಖೆಯು ಭ್ರಷ್ಟ ಕುಳಗಳನ್ನು ಬಲೆಗೆ ಬೀಳಿಸಿಕೊಳ್ಳುತ್ತಿದೆ. ಸಾರ್ವಜನಿಕರಿಗೆ ಹಣಕ್ಕಾಗಿ ಪೀಡಿಸುವ ಸರ್ಕಾರಿ ಅಧಿಕಾರಿಗಳು,ನೌಕರರಿಗೆ ಬಿಸಿ ಮುಟ್ಟಿಸುತ್ತಿದೆ.

ಇಂದು ಹಾವೇರಿಯಲ್ಲಿ ಹಣ ಪಡೆಯುತ್ತಿದ್ದ ಕಾರ್ಮಿಕ ಇಲಾಖೆಯ ನಿರೀಕ್ಷಕಿಯನ್ನು ಲೋಕಾಯುಕ್ತ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ.

ರಾಣೇಬೆನ್ನೂರು ತಾಲೂಕಿನ ಕಾರ್ಮಿಕ ಇಲಾಖೆಯ ಮಹಿಳಾ ಅಧಿಕಾರಿ ಮಮ್ತಾಜ್ ಬೇಗಂ ಅವರು ನಾರಾಯಣಪ್ಪ ಎಂಬ ಕಾರ್ಮಿಕನಿಂದ ಕಾರ್ಮಿಕರ ಕಾರ್ಡ್ ನೀಡಲು 5 ಸಾವಿರ ರೂಪಾಯಿ ಲಂಚ ಪಡೆಯುವ ವೇಳೆಗೆ ಅಧಿಕಾರಿಣಿಯು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಇದನ್ನೂ ಓದಿ : ನಮ್ಮಲ್ಲಿ Dont Disturb ಅಂತ ಗದರಿಸುವ ಸಂಸ್ಕೃತಿ ಇಲ್ಲ : ಶಾಸಕ ಯತ್ನಾಳ್

ಕಾರ್ಮಿಕ ಇಲಾಖೆ ಕಾರ್ಡ್ ಕೊಡಲು ಐದು ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಬಲೆಗೆ. ನಾರಾಯಣಪ್ಪ ಎಂಬ ಕಾರ್ಮಿಕರಿಂದ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ. ಲೋಕಾಯುಕ್ತ ಸಿಪಿಐ ಆಂಜನೇಯ ನೇತೃತ್ವದಲ್ಲಿ ದಾಳಿ ನಡೆಸಿ ಭ್ರಷ್ಟ ಮಹಿಳಾ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ.

ರಾಜ್ಯದಲ್ಲಿ ಮೊದಲಿನಂತೆ ಭ್ರಷ್ಟ ಕುಳಗಳಿಗೆ ಬಿಸಿ ಮುಟ್ಟಿಸುತ್ತಿರುವ ಲೋಕಾಯುಕ್ತ ಅಧಿಕಾರಿಗಳ ನಡೆ ಭ್ರಷ್ಟ ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿದೆ.

Exit mobile version