Site icon PowerTV

ಸತ್ಯ ಹೇಳಿದ್ರೆ ನಾನು ಮಠ ಸೇರಲ್ಲ! : ಕಾಂಗ್ರೆಸ್ ಸರ್ಕಾರದ ಉಳಿವಿನ ಬಗ್ಗೆ ಕೋಡಿ ಶ್ರೀ ಭವಿಷ್ಯ

ಹುಬ್ಬಳ್ಳಿ : ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಐದು ವರ್ಷಗಳ ಪೂರೈಕೆ ಬಗ್ಗೆ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಮಾರ್ಮಿಕವಾಗಿ ಭವಿಷ್ಯ ನುಡಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಗು ಮತ್ತು ಬಾಯಿ ಉದಾಹರಣೆ ನೀಡಿದರು. ಮೂಗು ಎಲ್ಲಾ ವಾಸನೆ ಗ್ರಹಿಸುತ್ತದೆ. ಆದರೆ, ಬಾಯಿಯಲ್ಲಿರುವ ಹೊಲಸನ್ನು ತೊರಿಸುವುದಿಲ್ಲ ಎಂದರು.

ಕಾಂಗ್ರೆಸ್ ಸರ್ಕಾರ ಸ್ಥಿರವಾಗಿರುತ್ತದೆ. ಕಾಂಗ್ರೆಸ್ ಉಚಿತ ಗ್ಯಾರಂಟಿಗಳಿಂದ ಒಳಿತಾಗುತ್ತದೆ. ಯಾವ ಮಹಿಳೆಗೆ ಸ್ವಾತಂತ್ರ್ಯ ಇರಲಿಲ್ಲ, ಇವತ್ತು ಆಕೆ ಸ್ವತಂತ್ರದಿಂದ ಓಡಾಡುತ್ತಿದ್ದಾಳೆ ಎಂದು ಕೋಡಿ ಶ್ರೀ ತಿಳಿಸಿದರು.

ಇದನ್ನೂ ಓದಿ : ಕೆಲವರಿಗೆ ಮಾತನಾಡುವ ಚಟವಿದೆ : ಶಿವರಾಮ್ ಹೆಬ್ಬಾರ್

ಲೋಕಸಭಾ ಚುನಾವಣೆ ವಿಚಾರವಾಗಿ ಮಾತನಾಡಿರುವ ಅವರು, ‘ಸತ್ಯಂ ಅಪ್ರಿಯಂ, ಅಸ್ಯತಂ ಪ್ರಿಯಂ’. ಸತ್ಯ ಹೇಳಿದರೆ ನಾನು ಮಠ ಸೇರುವುದಿಲ್ಲ. ಕಾದು ನೋಡಿ ಏನಾಗುತ್ತದೆ ಸಮಯ ಬಂದಾಗ ಹೇಳುವೆ ಎಂದು ಹೇಳಿದರು.

ಸರ್ಕಾರಕ್ಕೆ ದೈವವೇ ಉತ್ತರ ನೀಡಲಿದೆ

ನಾನು ಈ ಹಿಂದೆ ಹೇಳಿದಂತೆ ರಾಜ್ಯದಲ್ಲಿ ಬಹುಮತದ ಸರ್ಕಾರ ಅಧಿಕಾರಕ್ಕೆ ಬಂದಿದೆ. ರಾಜ್ಯದಲ್ಲಿ ಆಧ್ಯಾತ್ಮಿಕವಾಗಿ ರಾಜ್ಯ ಸರ್ಕಾರ ನಡೆಯುತ್ತಿದೆ. ಇದರಿಂದ ಅವರಿಗೆ ಒಳ್ಳೆಯದಾಗಲಿ. ಆಧ್ಯಾತ್ಮ ಬಿಟ್ಟು ಹೋದರೆ ಸರ್ಕಾರಕ್ಕೆ ದೈವವೇ ಉತ್ತರ ನೀಡಲಿದೆ ಎಂದು ಈ ಹಿಂದೆ ಕೋಡಿ ಶ್ರೀಗಳು ನುಡಿದಿದ್ದರು.

Exit mobile version