Site icon PowerTV

ಮಹಿಳೆಯರಿಗಾಗಿ ಪಿಂಕ್ ಕೊಠಡಿ ಉದ್ಘಾಟಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್

ತುಮಕೂರು: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನೂತನವಾಗಿ ಆರಂಭಿಸಿರುವ ಮಹಿಳೆಯರ
ಪಿಂಕ್‌ಕೊಠಡಿಗೆ ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಶುಕ್ರವಾರ ಚಾಲನೆ ನೀಡಿದರು.

ಕೊಠಡಿ ವೀಕ್ಷಿಸಿ ಮಾತನಾಡಿದ ಅವರು, ಈಗಾಗಲೇ ಇರುವ ವಿಶ್ರಾಂತಿ ಕೊಠಡಿಗಳು ಚಿಕ್ಕದಾಗಿದ್ದು, ಮಹಿಳೆಯರ ದಟ್ಟಣೆಗೆ ಅನುಸಾರ ಇದೀಗ ಪಿಂಕ್ ಕೊಠಡಿ ಸೌಲಭ್ಯ ಒದಗಿಸಲಾಗಿದೆ. ಇದರಿಂದ ಮಹಿಳೆಯರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಇದನ್ನೂ ಓದಿ: ಗೃಹಜ್ಯೋತಿ, ಅನ್ನಭಾಗ್ಯ ಇಂದಿನಿಂದ ಜಾರಿ

ಶಕ್ತಿ ಯೋಜನೆ ಹಿನ್ನೆಲೆ ಕೆಎಸ್‌ಆರ್‌ಟಿಸಿ ನಿಲ್ದಾಣಗಳಲ್ಲಿ ಮಹಿಳೆಯರ ದಟ್ಟಣೆ ಹೆಚ್ಚಾಗಿದ್ದು, ಮಹಿಳೆಯರು
ವಿಶ್ರಾಂತಿ ಪಡೆಯಲು ಹಾಗೂ ವಿಶೇಷವಾಗಿ ಬಾಣಂತಿಯರಿಗೆ ಅನುಕೂಲವಾಗಲು ಪಿಂಕ್ ಕೊಠಡಿ ಉದ್ಘಾಟಿಸಲಾಗಿದೆ ಎಂದರು.

 

Exit mobile version