Site icon PowerTV

ಬಿಎಸ್​ವೈ ನಮ್ಮ ಅಗ್ರಮಾನ್ಯರು, ಅವರನ್ನು ಷಡ್ಯಂತ್ರದಿಂದ ಇಳಿಸಿದರು : ರೇಣುಕಾಚಾರ್ಯ ಕಿಡಿ

ಬೆಂಗಳೂರು : ರಾಜ್ಯ ಬಿಜೆಪಿ ಪಕ್ಷದಲ್ಲಿ ನಡೆಯುತ್ತಿದ್ದ ಆಂತರಿಕ ಬೇಗುದಿಯಿಂದ ಆಡಳಿತ ಪಕ್ಷ ಕಾಂಗ್ರೆಸ್ ಎದುರು ಬಿಜೆಪಿ ಪದೇ ಪದೇ ಮುಜುಗರಕ್ಕೆ ಒಳಗಾಗಿ ಹಿನ್ನಡೆ ಅನುಭವಿಸುತ್ತಿತ್ತು.

ಒಂದು ಕಡೆ ದಿನಬೆಳಗಾದರೆ ಸ್ವಪಕ್ಷದ ನಾಯಕರ ವಿರುದ್ದ ಬಹಿರಂಗವಾಗಿ ವಾಗ್ದಾಳಿ ನಡೆಸುತ್ತಿದ್ದ ಹೊನ್ನಾಳಿಯ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯರಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಬೆಂಗಳೂರಿನಲ್ಲಿಂದು ತಮ್ಮ ನಿವಾಸಕ್ಕೆ ರೇಣುಕಾಚಾರ್ಯರನ್ನು ಕರೆಸಿಕೊಂಡು ಪಕ್ಷದ ಯಾವುದೇ ನಾಯಕರ ವಿರುದ್ದ ಮಾತನಾಡದಂತೆ ತಾಕೀತು ಮಾಡಿದ್ದಾರೆ. ಅಲ್ಲದೆ ಏನೇ ಅಸಮಾಧಾನವಿದ್ದರೂ ಸಹ ತಮ್ಮ ಗಮನಕ್ಕೆ ತರುವಂತೆ ಖಡಕ್ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ : ಭೂಮಿ ನಡುಗಿತು, ಮಳೆ ಬೆಳೆ ತಲ್ಲಣಗೊಂಡಿತು, ಜನರು ಆಪತ್ತುಗೊಂಡಾರು : ಕೋಡಿ ಶ್ರೀ ಸ್ಫೋಟಕ ಭವಿಷ್ಯ

ಇದೇ ವೇಳೆ ತಮ್ಮ ನಾಯಕನ ಎದುರು ರೇಣುಕಾಚಾರ್ಯ ಪಕ್ಷದ ನಾಯಕರ ವಿರುದ್ದ ಅಸಮಾಧಾನವನ್ನೂ ತೋಡಿಕೊಂಡು,ತಮಗಾದ ಅನ್ಯಾಯದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಯಡಿಯೂರಪ್ಪನವರ ಪಾದಯಾತ್ರೆಗಳ ಫಲದಿಂದ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಕಾಣಲು ಸಾಧ್ಯವಾಗಿದೆ. ಅವರು ನಮ್ಮ ಅಗ್ರಮಾನ್ಯ ನಾಯಕರು ಅಂಥವರನ್ನು ಷಡ್ಯಂತ್ರ ಮಾಡಿ ಎರಡು ಬಾರಿ ಅಧಿಕಾರದಿಂದ ಇಳಿಸಿದ್ದರು ಎಂದು ಪರೋಕ್ಷವಾಗಿ ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು.

Exit mobile version