Site icon PowerTV

ಸರ್ಕಾರದ ವಿರುದ್ದ ಸಿಡಿದೆದ್ದ 108 ಆಂಬ್ಯುಲೆನ್ಸ್ ಸಿಬ್ಬಂದಿ : ಪ್ರತಿಭಟನೆಯ ಎಚ್ಚರಿಕೆ

ಬೆಂಗಳೂರು : ರಾಜ್ಯದಲ್ಲಿ ತುರ್ತು ಆರೋಗ್ಯ ಸೇವೆ ಒದಗಿಸುತ್ತಿರುವ 108 ಆಂಬುಲೆನ್ಸ್ ಯೋಜನೆಯ​ ಸಿಬ್ಬಂದಿಯಿಂದ ಸಾಮೂಹಿಕ ರಜೆಗೆ ನಿರ್ಧರಿಸಲಾಗಿದೆ.

ಮಾರ್ಚ್​ನಿಂದ ನಾಲ್ಕು ತಿಂಗಳ ವೇತನವು ಸಿಬ್ಬಂದಿಗಳಿಗೆ ಪಾವತಿಯಾಗದೆ ನೌಕರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಅಲ್ಲದೆ ಮೂರು ವರ್ಷಗಳಿಂದ ಬಾಕಿ ಇರುವ ಅರಿಯರ್ಸ್ (2020,2021,2022) ಎಲ್ಲವನ್ನೂ ಪಾವತಿ ಮಾಡುವಂತೆ ರಾಜ್ಯ ಆರೋಗ್ಯ ಕವಚ ಆಂಬುಲೆನ್ಸ್ ನೌಕರರ ಸಂಘದಿಂದ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯರ್ಶಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ಜುಲೈ 7 ರ ಒಳಗಾಗಿ ವೇತನ ಪಾವತಿ ಮಾಡದೆ ಹೋದರೆ 8 ರಿಂದ ರಾಜ್ಯಾದ್ಯಾಂತ 108 ಆರೋಗ್ಯ ಕವಚ ಸಿಬ್ಬಂದಿಗಳು ಸಾಮೂಹಿಕ ರಜೆಯನ್ನು ಕೈಗೊಂಡು ಸರ್ಕಾರದ ಪ್ರತಿಭಟನೆ ಮಾಡುವುದಾಗಿ ಮನವಿಯಲ್ಲಿ ಸಂಘದಿಂದ ಎಚ್ಚರಿಸಲಾಗಿದೆ

Exit mobile version