Site icon PowerTV

ಆಕ್ಸಿಜನ್ ಸಿಲಿಂಡರ್ ಸ್ಫೋಟ, ಕಾರ್ಮಿಕನ ಸಾವು

ಬೆಂಗಳೂರು : ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡು ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಹಲಸೂರು ಗೇಟ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

ನಗರತ್ ಪೇಟೆಯ ಅಂಬಿಕಾ ರಿಫೈನರಿ ಅಂಗಡಿಯಲ್ಲಿ ವಿಷ್ಣು ಸಾವಂತ್ ಎಂಬುವವರು ಹಾಗೂ ಅವರ ಪತ್ನಿಚಿನ್ನಾಭರಣ ಕರಗಿಸುವ ಕೆಲಸ ಮಾಡಿಕೊಂಡಿದ್ದರು.

ಇದನ್ನೂ ಓದಿ : ಹಿಂದೂ-ಮುಸ್ಲಿಂ ಸಹೋದರರ ನಡುವೆ ಬೆಂಕಿ ಹಚ್ಚಬೇಡಿ : ಪರಮೇಶ್ವರಗೆ ಬಿಜೆಪಿ ತಿರುಗೇಟು

ನಿನ್ನೇ ಮಧ್ಯಾಹ್ನ ಸಿಲಿಂಡರ್ ಸ್ಫೋಟವಾಗಿ ಪತಿ ಸಾವನ್ನಪ್ಪಿದರೆ, ಗಾಯಗೊಂಡಿರುವ ಪತ್ನಿ ವೈಜಯಂತಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಿನ್ನ ಕರಗಿಸಲು ಬಳಸುವ ಸಿಲಿಂಡರ್ ಸ್ಫೋಟಗೊಳ್ಳಲು ಮಾಲೀಕನ ನಿರ್ಲಕ್ಷ್ಯವೇ ಕಾರಣವಾಗಿರುವ ಹಿನ್ನೆಲೆಯಲ್ಲಿ ಮಾಲೀಕ ರಮೇಶ್ ಕೊಠಾರಿ ಸೇರಿದಂತೆ ಆರು ಜನರ ವಿರುದ್ದ ಪ್ರಕರಣ ದಾಖಲಾಗಿದೆ.

Exit mobile version