Site icon PowerTV

ನಿಮಗೆ ಏನು ತಿಂದು ಅಭ್ಯಾಸ? ಅನ್ನವೋ, ಹಣವೊ? : ಶಾಸಕ ಯತ್ನಾಳ್

ವಿಜಯಪುರ : ತಿನ್ನಲು ಬರುವುದು ಅಕ್ಕಿಯೇ ಹೊರತು ಹಣವಲ್ಲ ಎಂದಿದ್ದ ಕಾಂಗ್ರೆಸ್ ನಾಯಕರಿಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಈಗ ನಿಮಗೆ ಏನು ತಿಂದು ಅಭ್ಯಾಸ ಇರುವುದು? ಅನ್ನವೋ, ಹಣವೊ? ಎಂದು ಕುಟುಕಿದ್ದಾರೆ.

ಸಾರ್ವಜನಿಕರಿಗೆ ಸಹಾಯ ಆಗುವುದನ್ನ ಹೇಳಿದಾಗ ಹೀಯಾಳಿಸೋದು. ಮತ್ತೆ ಈಗ ಅದೇ ನಿರ್ಧಾರ ಮಾಡುವುದು.’ನಮ್ಮಲ್ಲೇ ಮೊದಲು’ ಎಂದು ಪ್ರಕಟಿಸೋದು. ನಾವು ವಾಗ್ದಾನ ಮಾಡಿರೋದು ಕೊಡದೇ ಹೋದ್ರೆ ‘ಒಂದ್ ಸೆಕೆಂಡ್ ಕುರ್ಚಿ ಮೇಲೆ ಕುಳಿತುಕೊಳ್ಳೋಲ್ಲ’ ಅಂದಿದ್ರು. ಡಿಕೆಶಿ ತಯಾರಾಗಬಹುದು ಎಂದು ಛೇಡಿಸಿದ್ದಾರೆ.

ಇದನ್ನೂ ಓದಿನಮ್ಮ ಸರ್ಕಾರದಲ್ಲಿ ಕಾಸಿಗಾಗಿ ವರ್ಗಾವಣೆ ನಡೆದಿಲ್ಲ : ಎಂ.ಬಿ.ಪಾಟೀಲ್

ಬಿಜೆಪಿಗರಿಗೆ ಹಣ ತಿಂದೇ ಅಭ್ಯಾಸ

ಅನ್ನಭಾಗ್ಯದಲ್ಲಿ ಅಕ್ಕಿಯ ಬದಲು ಹಣ ಕೊಡಿ ಎಂದಿದ್ದ ಬಿಜೆಪಿ ನಾಯಕರು ಹೇಳಿಕೆಗೆ ರಾಜ್ಯ ಕಾಂಗ್ರೆಸ್ ಕಿಡಿಕಾರಿತ್ತು. ತಿನ್ನಲು ಬರುವುದು ಅಕ್ಕಿಯೇ ಹೊರತು ಹಣವಲ್ಲ. ಬಿಜೆಪಿಗರಿಗೆ ಹಣವನ್ನೇ ತಿಂದು ಅಭ್ಯಾಸವಿರಬಹುದು. ಆದರೆ, ಜನಸಾಮಾನ್ಯರು ತಿನ್ನುವುದು ಅನ್ನವನ್ನ. ಹಣ ತಿನ್ನುವ ಬಿಜೆಪಿಗೆ ಅನ್ನ ತಿನ್ನುವವರ ಸಂಕಷ್ಟ ಅರ್ಥವಾಗುವುದು ಅಸಾಧ್ಯ ಎಂದು ಕಾಂಗ್ರೆಸ್ ಟಾಂಗ್ ಕೊಟ್ಟಿತ್ತು.

Exit mobile version