Site icon PowerTV

ನಾಳೆ SSLC ಪೂರಕ ಪರೀಕ್ಷೆ ಫಲಿತಾಂಶ : ರಿಸಲ್ಟ್ ನೋಡಲು ಹೀಗೆ ಮಾಡಿ

ಬೆಂಗಳೂರು : ನಾಳೆ 2023ರ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ. ಬೆಳಗ್ಗೆ 11 ಗಂಟೆಯ ಬಳಿಕ ಫಲಿತಾಂಶವನ್ನು ವೆಬ್ ಸೈಟ್ http://karresults.nic.in ಜಾಲತಾಣದಲ್ಲಿ ವೀಕ್ಷಿಸಬಹುದು.

ಜೂನ್ 12 ರಿಂದ ಜೂನ್ 19ರವರೆಗೆ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ನಡೆಸಲಾಗಿತ್ತು. ಎಲ್ಲಾ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮುಕ್ತಾಯವಾಗಿದೆ. ಫಲಿತಾಂಶವನ್ನು ನಾಳೆ ಬೆಳಗ್ಗೆ 11 ಗಂಟೆಯ ನಂತರ ವೀಕ್ಷಿಸಬಹುದಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.

2023ರ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗೆ ಒಟ್ಟು 8,35,102 ವಿದ್ಯಾರ್ಥಿಗಳ ಪರೀಕ್ಷೆ ಬರೆದಿದ್ದರು. ಈ ಪೈಕಿ 7,00,619 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ 3,59,511 ಬಾಲಕಿಯರು ಪಾಸ್ ಆಗಿದ್ದರೆ, 3,41,108 ಬಾಲಕರು ತೇರ್ಗಡೆಯಾಗಿದ್ದರು. ಒಟ್ಟಾರೆ ಶೇ.83.89 ರಷ್ಟು ಫಲಿತಾಂಶ ದಾಖಲಾಗಿದೆ.

ಇದನ್ನೂ ಓದಿ : SSLC ಫೇಲ್‌ ಪ್ರಮಾಣ ಕಡಿಮೆ ಮಾಡಲು 10% ಕೃಪಾಂಕ

ರಿಸಲ್ಟ್​ ನೋಡಲು ಹೀಗೆ ಮಾಡಿ

Exit mobile version