Site icon PowerTV

ನಮ್ಮ ಸರ್ಕಾರದಲ್ಲಿ ಕಾಸಿಗಾಗಿ ವರ್ಗಾವಣೆ ನಡೆದಿಲ್ಲ : ಎಂ.ಬಿ.ಪಾಟೀಲ್

ಬೆಂಗಳೂರು : ರಾಜ್ಯ ಸರ್ಕಾರ ನಡೆಸುತ್ತಿರುವ ಅಧಿಕಾರಿಗಳ ವರ್ಗಾವಣೆಯ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ಸಚಿವ ಎಂ.ಬಿ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿಂದು ಮಾತನಾಡಿದ ಅವರು, ನಮ್ಮ ಸರ್ಕಾರದಲ್ಲಿ ಕಾಸಿಗಾಗಿ ವರ್ಗಾವಣೆ ನಡೆದಿಲ್ಲ ಎಲ್ಲವೂ ಪಾರದರ್ಶಕವಾಗಿ ನಡೆಯುತ್ತಿದೆ. ಅಲ್ಲದೆ ಸರ್ಕಾರದ ಮಟ್ಟದಲ್ಲಿ ನಾವೂ ಯಾವುದೇ ಟೆಂಡರ್ ಕೂಡ ಕರೆದಿಲ್ಲ ಆದರೆ ಕುಮಾರಸ್ವಾಮಿ ಈ ವಿಷಯದಲ್ಲಿ ಬಹಳ ಆತುರರಾಗಿದ್ದಾರೆ,ಅವ್ರ ಸರ್ಕಾರದಲ್ಲಿ ಪಾರದರ್ಶಕವಾಗಿ ನಡೆದುಕೊಂಡಿದ್ದಾರೆ ಅಂತ ತೋರಿಸಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ : ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕಟೀಲ್ ರಾಜೀನಾಮೆ ಕೊಡ್ಬೇಕು : ರೇಣುಕಾಚಾರ್ಯ ಒತ್ತಾಯ

ಅಲ್ಲದೆ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ ಅವರು, ಬಿಜೆಪಿಯನ್ನು ರಾಜ್ಯದ ಜನರು ತಿರಸ್ಕರಿಸಿದ್ದಾರೆ. ಆಗ ಬೊಮ್ಮಾಯಿಯವರೇ ಹೇಳಿದ್ದಾರೆ ಅಕ್ಕಿ ಕೊಡದಿದ್ರೆ ದುಡ್ಡು ಕೊಡಿ ಅಂತ ಈಗ ಪುಂಗಿ ಉದೋದಾ..? ಎಂದು ಪ್ರಶ್ನಿಸಿದ ಅವರು ಕೇಂದ್ರ ಸರ್ಕಾರ ಮೋಸ ಮಾಡಿದ್ದಲ್ಲದೆ ಬಡವರ ಅನ್ನದಲ್ಲೂ ರಾಜಕೀಯ ಮಾಡಿದೆ ಅದಕ್ಕಾಗಿ ಅನಿವಾರ್ಯದಿಂದ ಹಣ ಕೊಡುತ್ತಿದ್ದೇವೆ ಎನ್ನುವ ಮೂಲಕ ಬಡವರ ಅಕೌಂಟಿಗೆ ಹಣ ಹಾಕುವ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿದರು.

ಬಿಜೆಪಿಯವರು ಬ್ಲ್ಯಾಕ್ ಮಾರ್ಕೆಟರ್ಸ್ 1 ಕೆ.ಜಿ. ಅಕ್ಕಿಗೆ 60ರೂಪಾಯಿ ಅಂದ್ರೆ ಇವರು ಬ್ಲ್ಯಾಕ್ ನಲ್ಲಿ ಅಕ್ಕಿ ಶೇಖರಿಸಿಟ್ಟಿರಬಹುದೆಂದು ಬಿಜೆಪಿ ವಿರುದ್ದ ಹಿಗ್ಗಾ-ಮುಗ್ಗಾ ವಾಗ್ದಾಳಿ ನಡೆಸಿದರು.

Exit mobile version