Site icon PowerTV

ತಹಸಿಲ್ದಾರ್ ಅಶೋಕ್ ಒಳ್ಳೇಯ ವ್ಯಕ್ತಿಯಾಗಿದ್ದರು : ಸಚಿವೆ ಹೆಬ್ಬಾಳ್ಕರ್ ಸಂತಾಪ

ಬೆಳಗಾವಿ : ಬೆಳಗಾವಿಯಲ್ಲಿ ಗ್ರೇಡ್-2 ತಹಸಿಲ್ದಾರ್ ಸಾವು ಹಿನ್ನೆಲೆಯಲ್ಲಿ ಮಹಿಳಾ ಮತ್ತ ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮೃತ ತಹಸಿಲ್ದಾರ್ ಅಶೋಕ ಮಣ್ಣಿಕೇರಿಯವರ ಅಂತಿಮ ದರ್ಶನವನ್ನು ಪಡೆದರು.

ವೈಭವನಗರದಲ್ಲಿರುವ ಮಣ್ಣಿಕೇರಿಯವರ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡೆದ ಅವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ನಿನ್ನೇ ರಾತ್ರಿ ಮೂರು ಗಂಟೆಗೆ ಎರಡ್ಮೂರು ಮಿಸ್ ಕಾಲ್ ಆಗಿತ್ತು,ಆದರೆ ಬೆಳಗ್ಗೆ ಸಾವಿನ ಸುದ್ದಿ ಗೊತ್ತಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ : ಸಚಿವ ಕೆ.ಜೆ ಜಾರ್ಜ್ ಒಬ್ಬ ಶ್ರೀಮಂತ ವ್ಯಕ್ತಿ : ನಟ ಚೇತನ್ ಅಹಿಂಸಾ

ನಾಲ್ಕುವರೆ ವರ್ಷ ಆಪ್ತ ಕಾರ್ಯದರ್ಶಿಯಾಗಿ ರಾತ್ರಿ-ಹಗಲು ಎನ್ನದೇ ಕೆಲಸ ಮಾಡಿದ್ರು ಇಂತಹ ಒಳ್ಳೇಯ ಆಪ್ತ ಸಹಾಯಕನನ್ನು ಕಳೆದುಕೊಂಡಿದ್ದು ನನಗೆ ತೀವ್ರ ನೋವಾಗಿದೆ ಎಂದು ಸಂತಾಪ ಸೂಚಿಸಿದರು. ಅಶೋಕ್ ಸಾವು ಅನುಮಾನಾಸ್ಪದವೆಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.

Exit mobile version