Site icon PowerTV

ಟೀಕೆ ಮಾಡೋರು ಯಾರೂ ಅನ್ನಭಾಗ್ಯದ ಫಲಾನುಭವಿಗಳಲ್ಲ : ಬಿಜೆಪಿಗೆ ಶಾಸಕ ಹಿಟ್ನಾಳ್ ತಿರುಗೇಟು

ಕೊಪ್ಪಳ :- ನಮ್ಮ ಶಕ್ತಿ ಯೋಜನೆಯಿಂದ ಈಗಾಗಲೇ ಮಹಿಳೆಯರಿಗೆ ಅನುಕೂಲವಾಗಿದೆ,ಅದೇ ರೀತಿ ಅನ್ನಭಾಗ್ಯವೂ ಕೂಡ ಬಡವರಿಗೆ ಉಪಯೋಗವಾಗುತ್ತದೆ. ಇವುಗಳ ಬಗ್ಗೆ ಟೀಕೆ ಮಾಡೋರು ಯಾರೊಬ್ಬರೂ ಇದರ ಫಲಾನಿಭವಿಗಳಲ್ಲ ಎಂದು ಕೊಪ್ಪಳ ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್ ತಿರುಗೇಟು ನೀಟಿದ್ದಾರೆ.

ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಏನ್ ಕೆಲಸ ಇಲ್ಲ ಅವರಿರುವುದೆ ಟೀಕೆಗಳನ್ನು ಮಾಡೋದಕ್ಕೆ‌, ನಾವು ಎಲ್ಲಾ ಕಡೆ ಕೇಳಿದ್ದರೂ ಸಹ ಅಕ್ಕಿ ಸಿಕ್ಕಿಲ್ಲ ಹೀಗಾಗಿ ಸ್ವಲ್ಪ ದಿನ ಹಣವನ್ನು ನೀಡುತ್ತಿದ್ದೇವೆ ಎಂದರು.

ಅಲ್ಲದೆ ಜನವಿರೋಧಿ ಹೇಳಿಕೆಗಳಿಂದಲೇ ಬಿಜೆಪಿಯವರಿಗೆ ಜನರು ಬುದ್ದಿ ಕಲಿಸಿದ್ದಾರೆ, ಮುಂಬರುವ ಚುನಾವಣೆಯಲ್ಲೂ ಬುದ್ದಿ ಕಲಿಸುತ್ತಾರೆ ಎಂದು ಕಿಡಿಕಾರಿದರು.

ಬಿಜೆಪಿಯವರ ಅವಾಂತರಗಳು,ಅವರ ಸ್ಕ್ಯಾಮ್ ಗಳು ಎಲ್ಲವೂ ಗೊತ್ತು ಈಗಾಗಲೇ ಕೇಂದ್ರದ ಬೆಲೆ ಏರಿಕೆ ನೀತಿಯ ವಿರುದ್ದ ಜನರು ರೋಷಿ ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ : ಗೃಹಲಕ್ಷ್ಮೀ ಹೆಸರಲ್ಲಿ ಗೋಲ್ ಮಾಲ್! : ಮಹಿಳೆಯರಿಂದ 150 ರೂ. ಕಮಿಷನ್?

ರಾಜ್ಯ ವರ್ಗಾವಣೆ ದಂಧೆ ನಡೆಯುತ್ತಿದೆ ಎನ್ನೋ ಸಂಸದ ಪ್ರತಾಪ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ಹಿಟ್ಟಾಳ್,
ಯಾವುದೇ ಹೊಸ ಸರ್ಕಾರ ಬಂದ ಮೇಲೆ ವರ್ಗಾವಣೆ ಸಾಮಾನ್ಯ, ಸಿಂಹ ಎರಡೂ ಭಾರಿ ಎಂಪಿ ಆದವರು
ಅವರಿಗೆ ವಿಧಾನಸೌಧದಲ್ಲಿ ಏನ್ ನಡಿಯುತ್ತೆ ಗೊತ್ತಿಲ್ವಾ…? ಎಂದು ಪ್ರಶ್ನಿಸಿದರು.

ಹಿಂದೆ ಬೊಮ್ಮಾಯಿ ಮುಖ್ಯಮಂತ್ರಿ ಇದ್ದಾಗ, ಪೈಲ್ ಹಿಡ್ಕೊಂಡು ಪೋಟೋ ತೆಗೆಸಿಕೊಳ್ಳೊಳೋಗಿ ಫಜೀತಿ ಮಾಡ್ಕೊಂಡಿಡ್ರಿಲಿಲ್ವಾ…? ಎಂದು ಪ್ರತಾಪ್ ಸಿಂಹಗೆ ಟಾಂಗ್ ನೀಡಿದರು.

Exit mobile version