Site icon PowerTV

ದಮ್ಮು-ತಾಕತ್ತಿದ್ರೆ ಆ ದೊಣ್ಣೆನಾಯಕನ ಹೆಸರು ಬಹಿರಂಗ ಪಡಿಸಿ : ಕಾಂಗ್ರೆಸ್ ಸವಾಲು

ಬೆಂಗಳೂರು : ದಮ್ಮು ತಾಕತ್ತಿದ್ದರೆ ಬಿಜೆಪಿ ನಾಯಕರು ಆ ದೊಣ್ಣೆನಾಯಕನ ಹೆಸರನ್ನು ಬಹಿರಂಗ ಪಡಿಸಲಿ ಎಂದು ರಾಜ್ಯ ಕಾಂಗ್ರೆಸ್ ಸವಾಲು ಹಾಕಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಹೇಳಿದ ಗ್ರಾಮ ಪಂಚಾಯಿತಿ ಚುನಾವಣೆಗೂ ನಿಲ್ಲಲಾಗದ ಆ ನಾಯಕ ಯಾರು? ಎಂದು ಕುಟುಕಿದೆ.

ಒಂದು ಗ್ರಾಮ ಪಂಚಾಯಿತಿ ಚುನಾವಣೆಗೆ ನಿಂತು ಗೆಲ್ಲಲಾಗದವರು ಇಡೀ ಬಿಜೆಪಿಯನ್ನು ಹಿಡಿತಕ್ಕೆ ಪಡೆದು ಕುಣಿಸುತ್ತಿದ್ದಾರೆ. ದಮ್ಮು ತಾಕತ್ತಿದ್ದರೆ ರಾಜ್ಯ ಬಿಜೆಪಿ ಆ ದೊಣ್ಣೆನಾಯಕನ ಹೆಸರು ಹೇಳಲಿ. ಬಿಜೆಪಿ ಈಗ ಆತ್ಮವಿಮರ್ಶೆ ಮಾಡಿಕೊಳ್ಳುತ್ತಿದೆಯೋ ಆತ್ಮಹತ್ಯೆ ವಿಮರ್ಶೆ ಮಾಡಿಕೊಳ್ಳುತ್ತಿದೆಯೇ ಎಂಬ ಅನುಮಾನ ಶುರುವಾಗಿದೆ ಎಂದು ಛೇಡಿಸಿದೆ.

ಇದನ್ನೂ ಓದಿ : ನಿಮಗೆ ಏನು ತಿಂದು ಅಭ್ಯಾಸ? ಅನ್ನವೋ, ಹಣವೊ? : ಶಾಸಕ ಯತ್ನಾಳ್

ರೇಣುಕಾಚಾರ್ಯ ಹೇಳಿದ್ದೇನು?

ರಾಜ್ಯ ಚುನಾವಣೆ ಸೋಲಿನ ಬಗ್ಗೆ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಸ್ವಪಕ್ಷ ನಾಯಕರ ವಿರುದ್ಧವೇ ವಾಗ್ದಾಳಿ ನಡೆಸಿದ್ದರು. ತಮಿಳುನಾಡಿನಿಂದ ಅಣ್ಣಾಮಲೈ ಬಂದು ನಮಗೆ ಮಾರ್ಗದರ್ಶನ ಕೊಡುತ್ತಾರೆ. ಏನು ಅಣ್ಣಾಮಲೈ ದೊಡ್ಡ ಹೀರೋನಾ? ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲದವರು ನಮಗೆ ಪಾಠ ಮಾಡುತ್ತಾರೆ ಅಂತ ರೇಣುಕಾಚಾರ್ಯ ಕಿಡಿಕಾರಿದ್ದರು.

Exit mobile version