Site icon PowerTV

ಸಚಿವ ಕೆ.ಜೆ ಜಾರ್ಜ್ ಒಬ್ಬ ಶ್ರೀಮಂತ ವ್ಯಕ್ತಿ : ನಟ ಚೇತನ್ ಅಹಿಂಸಾ

ಕಲಬುರಗಿ : ಇಂಧನ ಸಚಿವ ಕೆ.ಜೆ ಜಾರ್ಜ್ ಒಬ್ಬ ಶ್ರೀಮಂತ ವ್ಯಕ್ತಿ. ಈ ರೀತಿಯ ‌ಮಾತನಾಡೋದು ಅವರಿಗೆ ಶೋಭೆ ತರುವುದಿಲ್ಲ ಎಂದು ನಟ ಚೇತನ್ ಅಹಿಂಸಾ ಅಸಮಾಧಾನ ಹೊರಹಾಕಿದರು.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕೆ.ಜೆ ಜಾರ್ಜ್ ಅವರು ಬಡವರಿಗೆ ದುಡ್ಡು ಬೇಡ ಅಂತಾರೆ. ಸರಕಾರ ದುಡ್ಡು, ರಾಗಿ ಜೋಳ ಎಲ್ಲವನ್ನೂ ‌ಕೊಡಬೇಕು ಎಂದು ಹೇಳಿದರು.

ರಾಜ್ಯ ಸರ್ಕಾರ ಅಕ್ಕಿ ಬದಲು ಹಣ ಕೊಡುವ ವಿಚಾರವಾಗಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ನುಡಿದಂತೆ ನಡೆಯಬೇಕು. ಸರ್ಕಾರ ಅಕ್ಕಿ ಬದಲು ಹಣದ ಜೊತೆಗೆ ರಾಗಿ, ಜೋಳ ಕೊಡಬೇಕು ಎಂದು ನಟ ಚೇತನ್ ಕುಮಾರ್ ತಿಳಿಸಿದರು.

ಬಡವರಿಗೆ ಶಿಕ್ಷಣ ನೀಡಬೇಕು. ಭೂ ಸುಧಾರಣೆ ಮಾಡಿ, ರಾಷ್ಟ್ರೀಕರಣ ಮಾಡಿ. ಅಕ್ಕಿ ವಿಚಾರದಲ್ಲಿ ಸಿದ್ದರಾಮಯ್ಯ ಸರ್ಕಾರ ಬೇರೆ ರಾಜ್ಯಗಳ ಮೊರೆ ಹೊಗುತ್ತಿದೆ. ನಮ್ಮ ರಾಜ್ಯದ ರೈತರನ್ನು ಬೆಳೆಸುವ‌ ಕೆಲಸವಾಗಬೇಕಿದೆ ಎಂದು ಹೇಳಿದರು.

ಇದನ್ನೂ ಓದಿ : ಮೊಸರಲ್ಲಿ ಕಲ್ಲು ಹುಡುಕುವ ಬುದ್ದಿ ಯಾಕ್ಬೇಕು : ದಿನೇಶ್​ ಗುಂಡೂರಾವ್

ದೇವದಾಸಿಯರಿಗೆ ಸೌಲಭ್ಯ ಕಲ್ಪಿಸಿ

ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದ ಹಾಗೂ ಮೌಢ್ಯಕ್ಕೆ ಒಳಗಾಗಿರುವ ದೇವದಾಸಿ ಮಹಿಳೆಯರಿಗೆ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ಪುನರ್ವಸತಿ ದೇವದಾಸಿ ಪದ್ಧತಿ ಕಾಯ್ದೆಯನ್ನು ಜಾರಿಗೊಳಿಸಬೇಕು. ರಾಜ್ಯದಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಮಾಜಿ ದೇವದಾಸಿಗಳಿದ್ದು, ಅವರ ಜೀವನ ಅತಂತ್ರವಾಗಿದೆ. ಆರ್ಥಿಕವಾಗಿ ಹಿಂದುಳಿದಿರುವ ಮಹಿಳೆಯರು ಅನಿವಾರ್ಯವಾಗಿ ಹಾಗೂ ಮೌಢ್ಯದಿಂದ ದೇವದಾಸಿ ಪದ್ಧತಿಗೆ ಒಳಗಾಗಿದ್ದಾರೆ ಎಂದು ಬೇಸರಿಸಿದರು.

Exit mobile version