Site icon PowerTV

ವಿದ್ಯುತ್ ಟ್ಯಾಕ್ಸ್ ಇಳಿಸುವ ಬಗ್ಗೆ ಸಿಎಂ ನಿರ್ಧಾರ ಮಾಡ್ತಾರೆ : ಕೆ.ಜೆ ಜಾರ್ಜ್

ಬೆಂಗಳೂರು : ವಿದ್ಯುತ್ ಟ್ಯಾಕ್ಸ್ ಇಳಿಸುವ ಬಗ್ಗೆ ಮುಖ್ಯಮಂತ್ರಿಗಳು ಅಂತಿಮ ತೀರ್ಮಾನ ‌ಮಾಡಲಿದ್ದಾರೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಹೇಳಿದರು.

ಕೈಗಾರಿಕೋದ್ಯಮಿಗಳ ಜೊತೆ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚೇಂಬರ್ ಆಫ್ ಕಾಮರ್ಸ್ ಅವರು ಬಂದಿದ್ರು. ವಿದ್ಯುತ್ ಬಿಲ್ ಹೆಚ್ಚಳ ಬಗ್ಗೆ ಚರ್ಚೆ ಮಾಡಿದ್ರು ಎಂದು ತಿಳಿಸಿದರು.

ಮುಖ್ಯಮಂತ್ರಿಗಳ ಬಳಿ ಕರೆದುಕೊಂಡು ಹೋಗಿ ಅಂತ ಚರ್ಚೆ ‌ಮಾಡಿದ್ರು. ಪ್ರತ್ಯೇಕ ಚರ್ಚೆಗೆ ಸಿಎಂ  ಸೂಚಿಸಿದ್ರು. ಅದರಂತೆ ಎಫ್ ಕೆ ಸಿಸಿಐ, ಕಾಸಿಯಾ, ಹುಬ್ಬಳ್ಳಿ ಚೇಂಬರ್ ಆಫ್ ಕಾಮರ್ಸ್, ಪೀಣ್ಯ ಕೈಗಾರಿಕಾ ಸಂಘ, ನೇಕಾರರು, ರೈಸ್ ಮಿಲ್ ಮಾಲೀಕರ ಜೊತೆ ಸಭೆ ಆಗಿದೆ. ಅವರ ಅಹವಾಲನ್ನು ನಾವು ಪರಿಗಣಿಸಿದ್ದೇವೆ ಎಂದರು.

ವಿದ್ಯುತ್ ಟ್ಯಾಕ್ಸ್ ಇಳಿಸಲು‌ ಮನವಿ

ಸಭೆಯ ಬಗ್ಗೆ ಮುಖ್ಯಮಂತ್ರಿಗಳಿಗೆ ವರದಿ ಕೊಡುತ್ತೇವೆ. ಆರ್ಥಿಕ ಮತ್ತು ಕಾನೂನಾತ್ಮಕ ಅಂಶಗಳು ಇದ್ದಾವೆ. ಅಂತಿಮವಾಗಿ ಸಿಎಂ ತೀರ್ಮಾನ ‌ಮಾಡ್ತಾರೆ. ಎಫ್ ಕೆಸಿಸಿ 3%, ಕಾಸಿಯಾ 1% ಗೆ ವಿದ್ಯುತ್ ಟ್ಯಾಕ್ಸ್ ಇಳಿಸಲು‌ ಮನವಿ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ : ಆಗಸ್ಟ್ ತಿಂಗಳಲ್ಲಿ ಮಹಿಳೆಯರ ಅಕೌಂಟಿಗೆ ಹಣ ಹಾಕ್ತೇವೆ : ಸಚಿವೆ ಹೆಬ್ಬಾಳ್ಕರ್

ಕೆಇಆರ್ ಸಿ ದರ ಪರಿಷ್ಕರಣೆಗೆ ಮನವಿ ಮಾಡಲಾಗುವುದು. ಎಲ್ಲರ ಅಹವಾಲನ್ನು ಕೇಳಿದ್ದೇವೆ. ಮುಂದಿನ ದಿನಗಳಲ್ಲಿ ‌ನಿರ್ಧಾರ ಮಾಡಲಿದ್ದೇವೆ ಎಂದು ಸಚಿವ ಕೆ.ಜೆ ಜಾರ್ಜ್ ತಿಳಿಸಿದರು.

ಸಭೆಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ ಬಿ ಪಾಟೀಲ್, ಇಂಧನ ಸಚಿವಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜಕುಮಾರ ಪಾಂಡೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಉಪಸ್ಥಿತರಿದ್ದರು.

Exit mobile version