Site icon PowerTV

41ರ ಆಂಟಿ ಜೊತೆ ಪೊಲೀಸಪ್ಪನ ಸಂಬಂಧ : ಮದುವೆಗೆ ಪಟ್ಟು ಹಿಡಿದಿದ್ದಕ್ಕೆ ಪರಾರಿ!

ಚಾಮರಾಜನಗರ : ಇದು 41 ವರ್ಷದ ವಿವಾಹಿತ ಮಹಿಳೆಯೊಂದಿಗಿನ ಪೊಲೀಸಪ್ಪನ ಪ್ರೇಮ್ ಕಹಾನಿ. ನ್ಯಾಯ ಕೊಡಿಸಬೇಕಾದ ಪೊಲೀಸಪ್ಪನೇ ಮಹಿಳೆಗೆ ಅನ್ಯಾಯ ಮಾಡಿರುವ ಪ್ರಸಂಗ.

ಹೌದು, ಈ ಘಟನೆ ಚಾಮರಾಜನಗರ ತಾಲೂಕಿನಲ್ಲಿ ನಡೆದಿದೆ. ಚಾಮರಾಜನಗರ ಪೂರ್ವ ಠಾಣೆಯ ಕಾನ್ಸ್‌ಟೇಬಲ್ ಅಶೋಕ್ ಮಹಿಳೆ ಜೊತೆಗೆ ಲಿವಿಂಗ್ ಟುಗೆದರ್‌ನಲ್ಲಿದ್ದ ಪೊಲೀಸಪ್ಪ.

41 ವರ್ಷದ ವಿವಾಹಿತ ಮಹಿಳೆ ಜೊತೆ ವಿವಾಹೇತರ ಸಂಬಂಧ ಇರಿಸಿಕೊಂಡಿದ್ದ ಅಶೋಕ್ ಇದೀಗ ನಾಪತ್ತೆ ಆಗಿದ್ದಾನೆ. ಸುಮಾರು 20 ದಿನಗಳಿಂದ ಈತ ಕಣ್ಮರೆಯಾಗಿದ್ದು ನನಗೆ ನ್ಯಾಯ ಕೊಡಿಸಿ ಅಂತ ಸಂತ್ರಸ್ತ ಮಹಿಳೆ ಮಹಿಳಾ ಠಾಣೆ ಮೇಟ್ಟಿಲೆರಿದ್ದಾಳೆ.‌

2020ರಲ್ಲಿ ಪರಿಚಯ, ಬಳಿಕ ಪ್ರೇಮಾಂಕುರ

ಸಂತ್ರಸ್ತ ಮಹಿಳೆ ಚಾಮರಾಜನಗರ ತಾಲೂಕಿನ ಗ್ರಾಮವೊಂದರ ನಿವಾಸಿ. ಈಕೆಗೆ 41 ವರ್ಷ. ಈ ಮಹಿಳೆ ಹಾಗೂ ಪೊಲೀಸಪ್ಪ ಅಶೋಕ್ ಮಧ್ಯೆ 2020ರಲ್ಲಿ ಪರಿಚಯವಾಗಿತ್ತು. ಪರಿಚಯ ಸಲುಗೆ ಪಡೆದುಕೊಂಡು ವಿವಾಹೇತರ ಸಂಬಂಧಕ್ಕೆ ಮುಟ್ಟಿತ್ತು. ಇವರ ಪ್ರೇಮ್ ಕಹಾನಿ ಮತ್ತಷ್ಟು ಗಟ್ಟಿಯಾಗಿ ಹಲವು ತಿಂಗಳುಗಳಿಂದ ಇಬ್ಬರೂ ಲಿವಿಂಗ್ ಟುಗೆದರ್‌ನಲ್ಲಿದ್ದರು. ಚಾಮರಾಜನಗರದಲ್ಲೇ ಮನೆ ಮಾಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ : ವಂಚನೆ ಆರೋಪ : ಸಲಗ ಚಿತ್ರದ ನಟಿ ಉಷಾ ಬಂಧನ, ಜಾಮೀನು ಮಂಜೂರು

ಅಷ್ಟರಲ್ಲಾಗಳೇ ಪೊಲೀಸಪ್ಪನಿಗೆ ಬೇರೊಂದು ಮದುವೆಗೆ ಸಿದ್ದನಾಗಿದ್ದಾನೆ. ಪೋಷಕರ ಒತ್ತಾಯದಿಂದ ಅಶೋಕ್ ಪ್ರೇಯಸಿ ಜೊತೆ ಅಂತರ ಕಾಯ್ದುಕೊಂಡು ಬೇರೆ ಮದುವೆಗೆ ಯೆಸ್ ಅಂದಿದ್ದಾನೆ. ಇತ್ತ, ಅಶೋಕ್ ಜೊತೆಯೇ ನಾನು ಜೀವನ‌ ಸಾಗಿಸಬೇಕು ಅಂತ ವಿವಾಹಿತೆ ಮಹಿಳೆ ರಚ್ಚೆ ಹಿಡಿದಿದ್ದಾಳೆ.

ಅರಿಶಿನ ಕೊಂಬು ಕಟ್ಟಿದ್ದ ಪೊಲೀಸಪ್ಪ

ಪೊಲೀಸ್ ವಸತಿ‌ ನಿಲಯದಲ್ಲೇ ಇಬ್ಬರೂ ಲಿವಿಂಗ್ ಟುಗೆದರ್‌ನಲ್ಲಿದ್ದರು. ಈ ವೇಳೆ ದೇವರ ಫೋಟೋ ಮುಂದೆ ಮಹಿಳೆಗೆ ಅರಿಶಿನ ಕೊಂಬು ಕಟ್ಟಿದನಂತೆ ಅಶೋಕ್. ಇದೀಗ, ವಿವಾಹೇತರ ಸಂಬಂಧದ ವಾಟ್ಸ್ ಆ್ಯಪ್ ಚಾಟ್, ಫೋಟೋಗಳ ಜೊತೆ ಸಂತ್ರಸ್ತ ಮಹಿಳೆ ತನಗೆ ಪ್ರಿಯಕರ ಬೇಕು, ಆತನ‌ ಜೊತೆ ಜೀವನ ನಡೆಸಬೇಕು ಅಂತ ಅಳಲು ತೋಡಿಕೊಂಡಿದ್ದಾರೆ.

ಈ ಸಂಬಂಧ ಚಾಮರಾಜನಗರ ಮಹಿಳಾ ಠಾಣೆಯಲ್ಲಿ ಅಶೋಕ್ ಹಾಗೂ ಪೋಷಕರ ವಿರುದ್ಧ ಸಂತ್ರಸ್ತ ಮಹಿಳೆ ದೂರು ದಾಖಲಿಸಿದ್ದಾರೆ.

Exit mobile version