Site icon PowerTV

ಗೃಹಜ್ಯೋತಿಗೆ 70 ಲಕ್ಷಕ್ಕೂ ಹೆಚ್ಚು ಗ್ರಾಹಕರು ನೋಂದಣಿ

ಬೆಂಗಳೂರು: ಗೃಹಬಳಕೆಯ ಫ್ರೀ ವಿದ್ಯುತ್‌ಗೆ ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಂಡವರ ಸಂಖ್ಯೆ 70 ಲಕ್ಷಕ್ಕೂ ದಾಟಿದೆ.

ಹೌದು, ರಾಜ್ಯದಲ್ಲಿ ಗೃಹ ಜ್ಯೋತಿ ಯೋಜನೆಗೆ ದಿನ ಕಳೆದಂತೆ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಅರ್ಜಿಗಳು ಬರುತ್ತಿದ್ದು ಕಳೆದ 10 ದಿನಗಳಲ್ಲಿ 70,05,892 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಗೃಹಜ್ಯೋತಿಗೆ 50 ಲಕ್ಷಕ್ಕೂ ಹೆಚ್ಚು ಗ್ರಾಹಕರು ನೋಂದಣಿ

ಇನ್ನೂ ಜೂನ್ 27, ಮಂಗಳವಾರ ಒಂದೇ ದಿನ ಸಂಜೆ 6 ಗಂಟೆಯವರೆಗೆ ಬೆಸ್ಕಾಂ ವ್ಯಾಪ್ತಿಯಲ್ಲಿ 2,58,263 ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ. ಸೆಸ್ಕ್ ನಲ್ಲಿ 98,842, ಜೆಸ್ಕಾಂನಲ್ಲಿ 63,435, ಹೆಸ್ಕಾಂನಲ್ಲಿ 1,19,309, ಹುಕ್ಕೇರಿ ಯಲ್ಲಿ 2,926, ಮೆಸ್ಕಾಂನಲ್ಲಿ- 76,771 ಸೇರಿದಂತೆ ರಾಜ್ಯದ್ಯಂತ ಒಟ್ಟು 6,19,546 ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ.. ಇನ್ನು ವಾರಾಂತ್ಯದ ವೇಳೆಗೆ 1 ಕೋಟಿ ಜನರ ನೋಂದಣಿ ಸಾಧ್ಯತೆ ಇದೆ ಎನ್ನಲಾಗಿದೆ..

Exit mobile version