Site icon PowerTV

ತಿಹಾರ್ ಇಂದ ಬಂದವರೂ ನಾಯಕರಾಗಬಹುದು : ಶಾಸಕ ಯತ್ನಾಳ್ ಟಾಂಗ್

ವಿಜಯಪುರ : ಯತ್ನಾಳ್ ಅವರಿಗೆ ಕನಿಷ್ಠ ಕಾಮನ್ ಸೆನ್ಸ್ ಇಲ್ಲ ಎಂದಿರುವ ರಾಜ್ಯ ಕಾಂಗ್ರೆಸ್ ಗೆ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್ ಕೊಟ್ಟಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ತಿಹಾರ್ ಇಂದ ಬಂದವರೂ ನಿಮ್ಮಲ್ಲಿ ನಾಯಕರಾಗಬಹುದು ಎಂದು ಕುಟುಕಿದ್ದಾರೆ.

ಟವಲ್ ಹಾಕೋದು, ‘Scared’ Politics ಮಾಡೋದು ನಿಮ್ಮ ಜಾಯಮಾನ, ನಮ್ಮದಲ್ಲ. ನಿಮ್ಮಲ್ಲಿ ಯಾರು ಯಾವುದಕ್ಕೆ ಟವಲ್ ಹಾಕಿದ್ರು ಅನ್ನುವ ದೆಹಲಿ ನಾಟಕ ರಾಷ್ಟ್ರವೇ ನೋಡಿದೆ. ನೀವು ಹೇಳಿರುವ ಪ್ರಕಾರ ರಾಜ್ಯದಲ್ಲೂ ಎಲ್ಲ ಕಡಿಮೆ ಮಾಡ್ತೀವಿ ಅಂದಿದ್ದಾರಲ್ವಾ, ಸಿಎಂ ಸಿದ್ದರಾಮಯ್ಯರಿಗೆ ಮಾಡೋಕ್ಕೆ ಹೇಳಿ ಎಂದು ಛೇಡಿಸಿದ್ದಾರೆ.

ಅರ್ಹತೆಯನ್ನು ನೀವು ನಿರ್ಧಾರ ಮಾಡೋದಲ್ಲ. ನಿಮ್ಮಲ್ಲಿ ಏನು ಬೇಕಾದರೂ ಆಗಬಹುದು. ತಿಹಾರ್ ಇಂದ ಬಂದವರೂ ನಾಯಕರಾಗಬಹುದು ಎಂದು ಡಿ.ಕೆ ಶಿವಕುಮಾರ್ ಹೆಸರು ಹೇಳದೇ ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ : ರಾಹುಲ್ ಗಾಂಧಿ ಒಬ್ಬ ಅರೆಹುಚ್ಚ : ಯತ್ನಾಳ್

ಟವೆಲ್ ಹಾಕಿದ್ದು ಯಾವ ಅರ್ಹತೆಯಿಂದ?

ಬೆಲೆ ಏರಿಕೆ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ಯತ್ನಾಳ್ ಅವರಿಗೆ ಚಾಟಿ ಬೀಸಿತ್ತು. ಯತ್ನಾಳ್ ಅವರೇ, ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಬಂದ ಎಡಿಟೆಡ್ ವಿಡಿಯೋ ಹಂಚಿಕೊಳ್ಳುತ್ತಿದ್ದೀರಿ, ಬಿಜೆಪಿ ಐಟಿ ಸೆಲ್ ನಿಮಗೂ 2 ರೂಪಾಯಿ ಕೊಡುತ್ತಿದೆಯೇ? ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬೆಲೆ ಏರಿಕೆಯನ್ನು ನಿಯಂತ್ರಿಸುತ್ತೇವೆ ಎಂದು ಸಿದ್ದರಾಮಯ್ಯನವರು ಎಂದಿದ್ದಾರೆ.

ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಬೆಲೆ ಏರಿಕೆ, ಇಳಿಕೆಯ ನಿಯಂತ್ರಣವಿದೆ. ಈ ಕನಿಷ್ಠ ಕಾಮನ್ ಸೆನ್ಸ್ ನಿಮಗೆ ಇಲ್ಲವೇ? ಹಾಗಿದ್ರೆ, ತಾವು ವಿಪಕ್ಷ ನಾಯಕನ ಸ್ಥಾನಕ್ಕೆ ಟವೆಲ್ ಹಾಕಿದ್ದು ಯಾವ ಅರ್ಹತೆಯಿಂದಲೋ ತಿಳಿಯದು ಎಂದು ಕುಟುಕಿತ್ತು.

Exit mobile version