Site icon PowerTV

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಸಚಿವ ಸಂಪುಟ ಸಭೆ

ಬೆಂಗಳೂರು:  ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ವಿಧಾನ ಸಭೆಯಲ್ಲಿ ಸಚಿವ ಸಂಪುಟದ ಮಹತ್ವದ ಸಭೆ ನಡೆಯಲಿದೆ.

ಇಂದು ಬೆಳಿಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ನಡೆಯಲಿರುವ ಸಂಪುಟ ಸಭೆಯಲ್ಲಿ ವಿಪಕ್ಷವಾಗಿರುವ ಬಿಜೆಪಿ ಮಾಸ್ಟರ್ ಸ್ಟ್ರೋಕ್ ನೀಡಲು ಆಡಳಿತ ಪಕ್ಷ ಕಾಂಗ್ರೆಸ್ ಸಿದ್ದತೆ ನಡೆಸಿದ್ದು ಬಹುಕೋಟಿ ಬಿಟ್ ಕಾಯಿನ್ ಹಗರಣದ ತನಿಖೆಗೆ ಆದೇಶ ನೀಡುವ ಸಾಧ್ಯತೆಳಿವೆ.

ರಾಜ್ಯ ಸರ್ಕಾರ ಚುನಾವಣೆ ಸಮಯದಲ್ಲಿ ಜನರಿಗೆ ನೀಡಿರುವ 5 ಗ್ಯಾರಂಟಿ ಭರವಸೆಗಳ ಕುರಿತು ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆಯು ನಡೆಯಲಿದೆ.ಈ ಸಭೆಯಲ್ಲಿ ಗೃಹಲಕ್ಷ್ಮೀ ಅರ್ಜಿ ಸಲ್ಲಿಕೆ ದಿನಾಂಕ, ಮಳೆಯ ಕೊರತೆ ಪರಿಹಾರ, ಮೈಸೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪರಿಶೀಲನೆಗೆ ತಾಂತ್ರಿಕ ತಂಡ ರಚನೆ ಕುರಿತು ಚರ್ಚೆ, ಹಿಂದಿನ ಸರ್ಕಾರದ ಅವಧಿಯಲ್ಲಿನ ಅಕ್ರಮಗಳ ತನಿಖೆ ಬಗ್ಗೆಯೂ ಕೆಲ ಸಚಿವರು ಪ್ರಸ್ತಾಪಿಸುವ ಸಾಧ್ಯತೆ.

ಇದನ್ನೂ ಓದಿ: ತೀವ್ರ ಕುತೂಹಲ ಮೂಡಿಸಿದ ಸಿಎಂ ಸಚಿವ ಸಂಪುಟ ಸಭೆ,ನಡೆಯಲಿದೆ ಗಂಭೀರ ವಿಷಯಗಳ ಚರ್ಚೆ

ಇನ್ನೂ ಜುಲೈ 1 ರಿಂದ ಜನರಿಗೆ 10 ಕೆ.ಜಿ. ನೀಡುತ್ತೇವೆ ಎಂದು ಹೇಳಿದ್ದ ಸರ್ಕಾರವು ಅಕ್ಕಿ ಹಂಚಿಕೆ ಮಾಡಬೇಕೋ ಅಥವಾ ಸಂಪೂರ್ಣವಾಗಿ ಅಕ್ಕಿಯನ್ನು ದಾಸ್ತಾನು ಮಾಡಿದ ಬಳಿಕ ಹಂಚಬೇಕೋ ಎನ್ನುವ ಕುರಿತು ಚರ್ಚಿಯಾಗಲಿದೆ. ಬಜೆಟ್​ ಅಧಿವೇಶನದ ದಿನಾಂಕವನ್ನು ಸಚಿವ ಸಂಪುಟ ಸಭೆ ಹೊರಹಾಕಲಿದೆ.

 

 

 

 

 

 

 

Exit mobile version