Site icon PowerTV

ಯಡಿಯೂರಪ್ಪ ಹೋರಾಟ ಮಾಡ್ತೀನಿ ಅಂದ್ಮೇಲೆ ಇವ್ರು ಅಕ್ಕಿಗೆ ದುಡ್ಡು ಕೊಡ್ತಿದ್ದಾರೆ : ಬಿ.ವೈ ವಿಜಯೇಂದ್ರ

ಬೆಂಗಳೂರು : ಗ್ಯಾರಂಟಿ ಜಾರಿಗೊಳಿಸದಿದ್ದರೆ ಧರಣೆ ಸತ್ಯಾಗ್ರಹ ಮಾಡುತ್ತೇನೆ ಎಂದಿದ್ದ ಯಡಿಯೂರಪ್ಪ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಕಾಂಗ್ರೆಸ್ ನಾಯಕರಿಗೆ ಪುತ್ರ ಹಾಗೂ ಶಾಸಕ ಬಿ.ವೈ ವಿಜಯೇಂದ್ರ ತಿರುಗೇಟು ಕೊಟ್ಟರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಹೋರಾಟ ಮಾಡುತ್ತೇನೆ ಎಂದ ಮೇಲೆ ಇವರು ಅಕ್ಕಿಗೆ ಹಣ ಕೊಡಲು ತೀರ್ಮಾನ ಮಾಡಿದ್ದಾರೆ ಎಂದು ಛೇಡಿಸಿದರು.

ಯಡಿಯೂರಪ್ಪ ಹುಟ್ಟು ಹೋರಾಟಗಾರ. ಹೋರಾಟ ಅಂದ್ರೆ ಯಡಿಯೂರಪ್ಪ, ಯಡಿಯೂರಪ್ಪ ಅಂದ್ರೆ ಹೋರಾಟ. ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎಂದು ಕೇಳಿದ್ವಿ. ಇಟ್ಟ ಹೆಜ್ಜೆ ಹಿಂದಿಡುವ ಪ್ರಶ್ನೆ ಇಲ್ಲ. ಹೋರಾಟದ ವಿಚಾರದಲ್ಲಿ ಕಾಂಗ್ರೆಸ್ ನಾಯಕರಿಂದ ಹೇಳಿಸಿಕೊಳ್ಳುವ ಅಗತ್ಯ ಇಲ್ಲ ಎಂದು ಎಂದು ಟಕ್ಕರ್ ಕೊಟ್ಟರು.

ಇದನ್ನೂ ಓದಿ : ಆಗಸ್ಟ್ ತಿಂಗಳಲ್ಲಿ ಮಹಿಳೆಯರ ಅಕೌಂಟಿಗೆ ಹಣ ಹಾಕ್ತೇವೆ : ಸಚಿವೆ ಹೆಬ್ಬಾಳ್ಕರ್

ಚುನಾವಣೆಗೂ ಮುನ್ನ ಕಾಂಗ್ರೆಸ್ ಕೊಟ್ಟ ಮಾತಿನಂತೆ ನಡೆಯಲಿ. ರಾಜ್ಯದ ಜನರ ಕಿವಿಗೆ ಹೂ ಇಡುವ ಕೆಲಸ ಮಾಡಬೇಡಿ‌. ಗ್ಯಾರಂಟಿ ಜಾರಿಗೊಳಿಸಲು ಆಗದಿದ್ದಲ್ಲಿ ರಾಜ್ಯದ ಜನರ ಕ್ಷಮೆ ಕೇಳಲಿ. ಕೊಟ್ಟ ಭರವಸೆ ಬೋಗಸ್, ಸುಳ್ಳು ಆಶ್ವಾಸನೆಗಳು ಎಂದು ಕ್ಷಮೆ ಕೇಳಲಿ ಎಂದು ವಿಜಯೇಂದ್ರ ಕಿಡಿಕಾರಿದರು.

Exit mobile version