Site icon PowerTV

ಅಕ್ಕಿಗೆ ದುಡ್ಡು ಕೊಡೋದೆ ಆದ್ರೆ, ಐದು ಕೆಜಿಗೆ ಕೊಡ್ತಾರಾ? : ಅಶ್ವತ್ಥನಾರಾಯಣ

ಬೆಂಗಳೂರು : ಅಕ್ಕಿ ಬದಲು ಫಲಾನುಭವಿಗಳ ಖಾತೆಗೆ ಹಣ ಹಾಕಲಾಗುತ್ತದೆ ಎಂಬ ಸಚಿವ ಸಂಪುಟದ ನಿರ್ಧಾರಕ್ಕೆ ಮಾಜಿ ಸಚಿವ  ಡಾ.ಸಿ.ಎನ್ ಅಶ್ವತ್ಥನಾರಾಯಣ ಕಿಡಿಕಾರಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅಕ್ಕಿಗೆ ದುಡ್ಡು ಕೊಡೋದೆ ಆದರೆ, ಐದು ಕಿಲೋಗೆ ಕೊಡ್ತಾರಾ? ಎಂದು ಪ್ರಶ್ನೆ ಮಾಡಿದರು.

ಇವರು ಹೇಳಿದ್ದು ಹತ್ತು ಕಿಲೋ ಅಕ್ಕಿ ಕೊಡ್ತೇವೆ ಅಂತ. ಹತ್ತು ಕಿಲೋ ಅಕ್ಕಿಗೆ ದುಡ್ಡು ಕೊಡ್ತಾರಾ? ೧೦ ಕಿಲೋ ಅಕ್ಕಿಗೆ ದುಡ್ಡನ್ನು ಕೊಡಬೇಕು‌. ಇವರು ದೋಖಾ ಮಾಡಿದ್ದಾರೆ. ಜನರಿಗೆ ಟೋಪಿ ಹಾಕಿದ್ದಾರೆ. ಎಪಿಎಲ್ ಕಾರ್ಡ್, ಅಂತ್ಯೋದಯ ಕಾರ್ಡ್ ಅವರಿಗೆ ಏನು ಮಾಡ್ತೀರಿ? ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : ಇದು 60 ಪರ್ಸೆಂಟ್ ಕಮಿಷನ್ ಸರ್ಕಾರ : ನಳಿನ್ ಕುಮಾರ್ ಕಟೀಲ್

ಒಂದು ತಗೊಂಡ್ರೆ ಒಂದು ಫ್ರೀ

ಕೇಂದ್ರ ಸರ್ಕಾರ ಅಂತ್ಯೋದಯ ಕಾರ್ಡ್ ಫಲಾನುಭವಿಗಳಿಗೆ 35 ಕಿಲೋ ಕೊಡುತ್ತಿದೆ. 5 ಕಿಲೋ ಕೂಡ ಕೇಂದ್ರ ಕೊಡುತ್ತಿದೆ. ಒಂದು ತಗೊಂಡ್ರೆ ಒಂದು ಫ್ರೀ ಎನ್ನುತ್ತಾರೆ. ಆದರೆ, ಎರಡರ ಬೆಲೆಯನ್ನು ಒಂದಕ್ಕೆ ಸೇರಿಸಿ ತಗೊತಾರೆ. ಕಾಂಗ್ರೆಸ್ ಸರ್ಕಾರ ಕೂಡ ಅದೇ ರೀತಿ ಮಾಡುತ್ತಿದೆ‌ ಎಂದು ಅಶ್ವತ್ಥನಾರಾಯಣ ಕುಟುಕಿದರು.

Exit mobile version