Site icon PowerTV

ಕಾಳಿಂಗ ಸರ್ಪದೊಡನೆ 6ರ ಪೋರನ ಸರಸ : ವಿಡಿಯೋ ಫುಲ್ ವೈರಲ್

ಕಾರವಾರ :- ಒಂದನೇ ತರಗತಿ ಓದುತ್ತಿರುವ ಬಾಲಕನೋರ್ವ ಕಾಳಿಂಗ ಸರ್ಪದೊಡನೆ ಸರಸವಾಡುತ್ತಿರುವ ವಿಡಿಯೋವೊಂದು ಈಗ ಸಾಮಾಜಿಕ ಜಾಲದಲ್ಲಿ ಸಖತ್ ವೈರಲ್ ಆಗುತ್ತಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ 6 ವರ್ಷದ ಪೋರನ ಸಾಹಸ ಈಗ ಎಲ್ಲರಿಗೆ ಶಾಕ್ ನೀಡುತ್ತಿದೆ. ಬಾಲಕ ವಿರಾಜ್ ಪ್ರಶಾಂತ್ ಹುಲೇಕರ್ ಎಂಬಾತನು ವಿಷಪೂರಿತ ಸರ್ಪವನ್ನೆ ತನ್ನ ಮಾತು ಕೇಳುವಂತೆ ಮಾಡುವ ಮೂಲಕ ಈಗ ಎಲ್ಲರ ಹುಬ್ಬೆರುವಂತೆ ಮಾಡಿದ್ದಾನೆ.

ಯಾವುದೇ ವಿಷಪೂರಿತ ಹಾವಿರಲ್ಲಿ ಸಲೀಸಾಗಿ ಅವುಗಳನ್ನು ತನ್ನ ಮುಂದೆ ನೃತ್ಯ ಮಾಡಿಸುವ ಚತುರ ವಿರಾಜ್ ಶಿರಸಿಯ ಕೆ.ಎಚ್.ಬಿ. ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಬಾಲಕನಾಗಿದ್ದಾನೆ. ಬಾಲಕನ ಈ ಅಸಾಮಾನ್ಯ ಧೈರ್ಯಕ್ಕೆ ಸಾರ್ವಜನಿಕರು ಶಹಬ್ಬಾಷ್ ಎನ್ನುತ್ತಿದ್ದಾರೆ.

 

Exit mobile version