Site icon PowerTV

ಜುಲೈ 5ರೊಳಗಾಗಿ ರಾಜ್ಯದಲ್ಲಿ ಮಳೆಯಾಗುತ್ತೆ: ಚಲುವರಾಯಸ್ವಾಮಿ ಭವಿಷ್ಯ

ಮಂಡ್ಯ: ಜುಲೈ 5 ರ ಒಳಗೆ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತದೆ, ಮಳೆಯಾಗುವ ಬಗ್ಗೆ ಒಳ್ಳೇಯ ರಿಪೋರ್ಟ್ ಬಂದಿದೆ ನಾವೂ ಕೂಡ ಮಳೆಗಾಗಿ ಪ್ರಾರ್ಥನೆ ಮಾಡುತ್ತಿದ್ದೇವೆ ಎಂದು ಕೃಷಿ ಸಚಿವ ಚಲುವರಾಯ ಸ್ವಾಮಿ ಭವಿಷ್ಯ ನುಡಿದಿದ್ದಾರೆ.

ಮಂಡ್ಯದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಮಾಡಿದಂತೆ ನಾಡಿನ ಜನರೂ ಸಹ ಪ್ರಾರ್ಥನೆ ಮಾಡಿ ಖಂಡಿತವಾಗಿಯೂ 5-6 ದಿನಗಳಲ್ಲಿ ವರುಣನ ಆಗಮನದ ನಂಬಿಕೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡುವಣ ಹೊಂದಾಣಿಕೆಯ ಕುರಿತು ಪ್ರತಿಕ್ರಿಯಿಸಿದ ಅವರು ಈ ಹೊಂದಾಣಿಕೆ ಬಿಜೆಪಿ-ಜೆಡಿಎಸ್ ಪಕ್ಷಗಳ ಆಂತರಿಕ ವಿಚಾರವಾಗಿದೆ ಎಂದರು.

ಇದನ್ನೂ ಓದಿ: ಕೆಂಪೇಗೌಡ ಜಯಂತಿ ಆಚರಣೆಯ ಕೀರ್ತಿ ಕಾಂಗ್ರೆಸ್ಸಿಗೆ ಸಲ್ಲುತ್ತದೆ : ಸಚಿವ ಚಲುವರಾಯ ಸ್ವಾಮಿ

ಅಲೈಯನ್ಸ್ ಆಗ್ತಾರೋ, ಇನ್ ಡೈರೆಕ್ಟ್ ಅಲೈಯೆನ್ಸ್ ಆಗ್ತಾರೋ, ಅಥವಾ ಪೂರ್ತಿ ಮರ್ಜ್ ಆಗ್ತಾರೋ ಅದು ಅವರ ಪಕ್ಷದ ವಿಚಾರವಾಗಿದೆ ಅವರಿಗೆ ಬಿಟ್ಟಿದ್ದು. ಆದರೆ ನಮಗೆ ಜನರು ಜವಾಬ್ದಾರಿ ಕೊಟ್ಟಿದ್ದಾರೆ ಹೀಗಾಗಿ ಕೆಲಸ ಮಾಡುತ್ತೇವೆ ಚುನಾವಣೆ ಬಂದಾಗ ನಮ್ಮ ಪಕ್ಷ ಅದನ್ನು ಸಮರ್ಥವಾಗಿ ಎದುರಿಸಲಿದೆ ಎಂದು ತಿಳಿಸಿದರು.

ಜೊತೆಗೆ ಯಾವ ಪಕ್ಷ ಮಿಂಗಲ್ ಆಗುತ್ತೆ ಅನ್ನೋದು ನಮಗೆ ಅವಶ್ಯಕತೆ ಇಲ್ಲದ ವಿಷಯ. ಬಿಜೆಪಿ-ಜೆಡಿಎಸ್ ಪಕ್ಷಗಳಿಗೆ ಕಾಂಗ್ರೆಸ್ ಪಕ್ಷವೇ ಟಾರ್ಗೆಟ್ ಆಗಬೇಕು, ಅಲ್ಲದೇ ಬೇರೆ ಯಾವ ಪಕ್ಷ ಟಾರ್ಗೆಟ್ ಆಗೋಕೆ ಸಾಧ್ಯನಾ.? ಎಂದು ಪ್ರಶ್ನಿಸಿದರು. ಈ ರಾಜ್ಯದಲ್ಲಿ ಮೂರೇ ಪಕ್ಷಗಳಿರುವುದು ಇನ್ನುಳಿದ ಎರಡೂ ಪಕ್ಷಗಳು ಸೇರಿದ್ಮೇಲೆ ಕಾಂಗ್ರೆಸನ್ನೇ ಟಾರ್ಗೇಟ್ ಮಾಡಬೇಕು ಎಂದರು.

 

 

Exit mobile version